ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಮೊಹಮ್ಮದ್ ಆಶಿಕ್

Update: 2022-10-23 13:22 GMT

ಪುತ್ತೂರು: ಸಂತ ಫಿಲೋಮಿನಾ ಕಾಲೇಜ್‍ನ ವಿಧ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಮೊಹಮ್ಮದ್ ಆಶಿಕ್ ಅವರು ಆಯ್ಕೆಯಾಗಿದ್ದಾರೆ. 

ಕಾಲೇಜ್‍ನ ವಿದ್ಯಾರ್ಥಿ ಸಂಘದ ಚುನಾವಣೆಯು ಶನಿವಾರ ಕಾಲೇಜ್‍ನಲ್ಲಿ ನಡೆಯಿತು. ಕಾರ್ಯದರ್ಶಿಯಾಗಿ ಅನುಶ್ರೀ, ಜೊತೆ ಕಾರ್ಯದರ್ಶಿಯಾಗಿ ಶಿವಾನಿ ಎಂ ಅವರು ಚುನಾಯಿತರಾದರು. ಕಾಲೇಜು ಪ್ರಾಂಶುಪಾಲ ಡಾ. ಆಂಟೋನಿ ಪ್ರಕಾಶ್ ಮೊಂತೆರೋ ವಿಜೇತರನ್ನು ಅಭಿನಂದಿಸಿದರು.

ವಿದ್ಯಾರ್ಥಿ ಕ್ಷೇಪಪಾಲನಾ ಅಧಿಕಾರಿಗಳಾದ ಡಾ. ಚಂದ್ರಶೇಖರ್ ಮತ್ತು ಭಾರತಿ ಎಸ್ ರೈ ಅವರು ಚುನಾವಣಾ ಪ್ರಕ್ರಿಯೆ ನಡೆಸಿದರು. ಉಪನ್ಯಾಸಕರಾದ ಪ್ರೊ. ಗಣೇಶ್ ಭಟ್, ಡಾ.ಎ.ಪಿ. ರಾಧಾಕೃಷ್ಣ, ಡಾ. ವಿಜಯ ಕುಮಾರ್ ಮೊಳೆಯಾರ್, ವಿನಯಚಂದ್ರ, ಡಾ. ರಾಧಾಕೃಷ್ಣ ಗೌಡ, ವಾಸುದೇವ ಎನ್ ಸಹಕರಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News