ಬ್ಯಾರೀಸ್ ವೆಲ್ಫೇರ್ ಫೋರಮ್ ಅಬುಧಾಬಿ ವತಿಯಿಂದ 'ಸೀರತ್ ಉನ್ ನೆಬಿ' ಕಾರ್ಯಕ್ರಮ

Update: 2022-10-24 05:13 GMT

ಅಬುಧಾಬಿ : ಬ್ಯಾರೀಸ್ ವೆಲ್ಫೇರ್ ಫೋರಮ್ (BWF), ಅಬುಧಾಬಿ ವತಿಯಿಂದ ನಗರದ ಇಂಡಿಯನ್ ಇಸ್ಲಾಮಿಕ್ ಸೆಂಟರ್ ಸಭಾಂಗಣದಲ್ಲಿ 'ಸೀರತ್ ಉನ್ ನೆಬಿ' ಕಾರ್ಯಕ್ರಮ ನಡೆಯಿತು. ಬ್ಯಾರೀಸ್ ವೆಲ್ಫೇರ್ ಫೋರಮ್ ಅಧ್ಯಕ್ಷರಾದ ಮೊಹಮ್ಮದ್ ಅಲಿ ಉಚ್ಚಿಲ್ ಅಧ್ಯಕ್ಷತೆ ವಹಿಸಿದ್ದರು.

ಮುಸ್ಲಿಂ ಸೆಂಟ್ರಲ್ ಕಮಿಟಿ ದ.ಕ. ಮತ್ತು ಉಡುಪಿ ಇದರ ಅಧ್ಯಕ್ಷರಾದ ಹಾಜಿ ಮೊಹಮ್ಮದ್ ಮಸೂದ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಅರ್ಷ್ ಹನೀಫ್ ಅವರ ಕಿರಾಅತ್ ಪಠಣವನ್ನು ಮುಜೀಬ್ ಉಚ್ಚಿಲ್ ಕನ್ನಡಕ್ಕೆ ಭಾಷಾಂತರಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಮದುಮೂಲೆ ಸಭಾ ಕಾರ್ಯಕ್ರಮ ನಡೆಸಿದರು. ಮೊಹಮ್ಮದ್ ಅಲಿ ಉಚ್ಚಿಲ್ ಸ್ವಾಗತ ಭಾಷಣ ಮಾಡಿ, ಪ್ರಸ್ತುತ ಪರಿಸ್ಥಿತಿಯ ವಿಶ್ಲೇಷಣೆ ನಡೆಸಿದರು.

ಪ್ರಖ್ಯಾತ ಇಸ್ಲಾಮೀ ಪಂಡಿತರಾದ ಸೂಫಿಯಾನ್ ಸಖಾಫಿ ಮತ್ತು ಮುಸ್ತಫಾ ನಹೀಮಿ ಹಾವೇರಿ ಅವರು ಪ್ರವಾದಿ ಮುಹಮ್ಮದ್ (ಸ.ಅ) ಅವರ ಜೀವನ ಸಂದೇಶವನ್ನು ಮತ್ತು ಸಹೋದರ ಧರ್ಮದವರೊಂದಿಗೆ ಸೌಹಾರ್ದತೆಯ ಅಗತ್ಯವನ್ನು ಒತ್ತಿ ಹೇಳಿದರು.

BWF ಉಪಾಧ್ಯಕ್ಷ ರವೂಫ್ ಕೈಕಂಬ ಮಿಲಾದ್ ಸಂದೇಶ ನೀಡಿದರು. ಈ ಸಂದರ್ಭ ಮೊಹಮ್ಮದ್ ಮಸೂದ್ ಅವರನ್ನು ಶಾಲು ಹೊದಿಸಿ ಮತ್ತು ಸ್ಮರಣಿಕೆ ನೀಡಿ‌ ಸನ್ಮಾನಿಸಲಾಯಿತು. ಅತಿಥಿಗಳಾಗಿ ಡಾ. ಇರ್ಷಾದ್, ಶಹೀರ್ ಹುದವಿ, ಅಮಾನಿ ಮೌಲವಿ, ಕಬೀರ್ ಮತ್ತು ನವಾಝ್ ಕೋಟೆಕಾರ್ ಭಾಗವಹಿಸಿದ್ದರು. ವಿ.ಕೆ. ರಶೀದ್ ವಂದಿಸಿದರು.

BWF ಪದಾಧಿಕಾರಿಗಳಾದ ಹಂಝ ಕಣ್ಣಂಗಾರ್, ಇಮ್ರಾನ್ ಕುದ್ರೋಳಿ, ನವಾಝ್ ಉಚ್ಚಿಲ್, ಹಮೀದ್ ಗುರುಪುರ, ಹನೀಫ್ ಉಳ್ಳಾಲ್, ಅಬ್ದುಲ್ ಮಜೀದ್ ಕುತ್ತಾರ್, ಮಜೀದ್ ಆತೂರ್, ಜಲೀಲ್ ಬಜ್ಪೆ, ಇರ್ಫಾನ್ ಕುದ್ರೋಳಿ, ಮೊಹಿಯುದ್ದೀನ್ ಹಂಡೇಲ್,‌ ರಶೀದ್ ಬಿಜೈ, ಮುಹಮ್ಮದ್ ಕಲ್ಲಾಪು, ಬಶೀರ್ ಬಜ್ಪೆ, ಬಶೀರ್ ಉಚ್ಚಿಲ್ ಕಾರ್ಯಕ್ರಮ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News