ಮಂಗಳೂರು: ಚೋಯ್ಸ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ 6ನೇ ಮಳಿಗೆ ಉದ್ಘಾಟನೆ

Update: 2022-10-24 12:04 GMT

ಮಂಗಳೂರು, ಅ. 24; ಚೋಯ್ಸ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ ಸಂಸ್ಥೆಯ 6ನೆ ಆಭರಣ ಮಳಿಗೆ ನಗರದ ಹಂಪನಕಟ್ಟೆಯ ಆಲ್ಫಾ ಟವರ್ ನಲ್ಲಿ ಇಂದು ಸಯ್ಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್, ಒಡಿಯೂರು ಶ್ರೀ ಗುರು ದೇವಾನಂದ ಸ್ವಾಮೀಜಿ, ಮಿಲಾಗ್ರಿಸ್ ಚರ್ಚ್‌ನ ಧರ್ಮಗುರು ವಂ.ಥಾಮಸ್ ಡಿ ಕ್ಯಾಸ್ಟ್ರೊ ಅವರು ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿದರು.

ಸಮಾರಂಭದಲ್ಲಿ ಸಯ್ಯದ್ ಪೂಕುಂಞಿ ತಂಙಳ್ ಉದ್ಯಾವರ ಮೊದಲಾದವರು ಭಾಗವಹಿಸಿದ್ದರು. ಮಂಗಳೂರು ಖಾಝಿ ಅಲ್-ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಶನಿವಾರ ಭೇಟಿ ನೀಡಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಉಪಾಧ್ಯಕ್ಷರಾದ ಐವನ್ ಡಿಸೋಜ, ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಇಲ್ಯಾಸ್ ಮಹಮ್ಮದ್ ತುಂಬೆ, ಮಾಜಿ ಮೇಯರ್ ಕೆ.ಇ ಅಶ್ರಫ್, ಅಲ್ಫಾ ಟವರ್ ಹಂಪನಕಟ್ಟೆ ಮಂಗಳೂರು ಇದರ ಮಾಲಕ ಲುತ್ಫುಲ್ಲಾ ಖಾಝಿ, ಎಸ್ಕೆಎಸ್ಸೆಸ್ಸೆಫ್ ಕಾರ್ಯದರ್ಶಿ ಇಸ್ಮಾಯಿಲ್ ಯಾಮಾನಿ ತಿಂಗಳಾಡಿ,‌ ಇಬ್ರಾಹೀಂ ನಾಡಾಜೆ, ಮೌಶೀರ್ ಸಾಮಾಣಿಗೆ ಮೊದಲಾದವರು ಉಪಸ್ಥಿತರಿದ್ದರು.

ಚೋಯ್ಸ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ ಸಂಸ್ಥೆಯ ಪಾಲುದಾರರಾದ ಅಶ್ರಫ್ ನಾಡಾಜೆ ಹಾಗೂ ಶಹೀರ್ ಬಿ.ಎಂ  ಸ್ವಾಗತಿಸಿದರು.

ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಸಂದರ್ಶನ ನೀಡುವವರಿಗಾಗಿ ಚಿನ್ನದ ನಾಣ್ಯಗಳಿಸುವ ಅದೃಷ್ಟದ ಅವಕಾಶ, ಮಜೂರಿ ವೆಚ್ಚವಿಲ್ಲದೆ ಚಿನ್ನದ ಖರೀದಿಗೆ ಅವಕಾಶ, ಆಭರಣ ಖರೀದಿಸುವ ಪ್ರತಿ ಗ್ರಾಹಕರಿಗೆ ಅದೃಷ್ಟದ ಕೂಪನ್ ಮೂಲಕ  ಡೈಮಂಡ್ ನೆಕ್ಲೇಸ್ ಬಂಪರ್ ಬಹುಮಾನ ವಿಶೇಷ ಆಕರ್ಷಣೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News