ಮೇಲಂಗಡಿಯಲ್ಲಿ ಮಿಲಾದ್ ಪ್ರಯುಕ್ತ ಪ್ರತಿಭಾ ಕಾರಂಜಿ

Update: 2022-10-24 13:40 GMT

ಮಂಗಳೂರು: ಮೇಲಂಗಡಿ ಮುಹಿಯುದ್ದೀನ್ ಜುಮಾ ಮಸೀದಿ ಮತ್ತು ಖಂಝುಲ್ ಉಲೂಮ್ ಮದ್ರಸಾ ವತಿಯಿಂದ ರವಿವಾರ ಮಸೀದಿಯ ವಠಾರದಲ್ಲಿ ಮಿಲಾದ್ ಪ್ರಯುಕ್ತ ನಡೆದ ಪ್ರತಿಭಾ ಕಾರಂಜಿ ಸಮಾರೋಪಗೊಂಡಿತು.

ಮನುಷ್ಯನಲ್ಲಿ ತಪ್ಪು ಬರುವುದು ಸಾಮಾನ್ಯವಾಗಿದ್ದು ತಪ್ಪನ್ನೇ ಮುಂದಿಟ್ಟುಕೊಂಡು ತಪ್ಪು ಸಂದೇಶ ಬಿತ್ತರಿಸಿ ಗುಂಪುಗಾರಿಕೆ ಮಾಡದೆ ಅದನ್ನು ಹೇಳಿ ತಿದ್ದುವ ಪ್ರಯತ್ನ ಮಾಡಬೇಕು, ಊರಿನಲ್ಲಿ ಒಗ್ಗಟ್ಟು ಕಾಪಾಡಿಕೊಂಡು ಮುನ್ನಡೆಯಬೇಕು ಎಂದು ಅಧ್ಯಕ್ಷತೆ ವಹಿಸಿದ ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಅಭಿಪ್ರಾಯಪಟ್ಟರು.

ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ ಮಾತನಾಡಿ, ವೈದ್ಯ, ಇಂಜಿನಿಯರ್ ಆಗಬೇಕೆನ್ನುವ ಕನಸು ಕಾಣುವ ಮೊದಲು ಧಾರ್ಮಿಕ ಜ್ಞಾನ ಪಡೆಯುವ ಬಗ್ಗೆ ವಿಶೇಷ ಆಸಕ್ತಿ ವಹಿಸಬೇಕು ಎಂದರು.

ಮಾಜಿ ಅಧ್ಯಕ್ಷ ಫಾರೂಕ್ ಉಳ್ಳಾಲ್ ಮಾತನಾಡಿ, ಸಮುದಾಯದ ಮಕ್ಕಳು ಮದ್ರಸಾಕ್ಕೆ ಹೋಗುವ ಸಂದರ್ಭ ಅಳವಡಿಸಿಕೊಳ್ಳುವ ಶಿಸ್ತು ನಂತರದ ಜೀವನದಲ್ಲೂ ಮುಂದುವರಿಸಬೇಕು ಎಂದು ಕರೆ ನೀಡಿದರು.

ಮುಫತ್ತಿಸ್ ಅಬೂಬಕ್ಕರ್ ಅಲ್‌ಅಝ್ಝರಿ, ಮಸೀದಿಯ ಖತೀಬ್ ಮುಹಮ್ಮದ್ ಅಲಿ, ಸಯ್ಯಿದ್ ಮದನಿ ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಇಬ್ರಾಹಿಂ ಎಂ.ಎಚ್., ಪ್ರಧಾನ ಕಾರ್ಯದರ್ಶಿ ಅಮೀರ್ ಹಾಜಿ, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಪೇಟೆ ಮಸೀದಿ ಅಧ್ಯಕ್ಷ ಮೊಯಿದ್ದೀನ್, ಮಸೀದಿಯ ಕಾರ್ಯದರ್ಶಿ ಅಬ್ದುಲ್ ರಹ್ಮಾನ್, ಕೋಶಾಧಿಕಾರಿ ರಶೀದ್ ಮಹಮ್ಮದ್, ಕಬೀರ್ ಬುಖಾರಿ, ಇಸ್ಹಾಕ್ ಬಸ್ತಿಪಡ್ಪು, ರಹೀಂ ಮುಟ್ಟಿಕ್ಕಲ್ ಮೊದಲಾದವರು ಉಪಸ್ಥಿತರಿದ್ದರು.

ಮೇಲಂಗಡಿ ಜುಮಾ ಮಸೀದಿ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಲಾಂ ಮದನಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News