ಮಂಗಳೂರು: ಸಂತ ಮದರ್ ತೆರೇಸಾ ವಿಚಾರ ವೇದಿಕೆಯಿಂದ ​ದೀಪಾವಳಿ ಆಚರಣೆ

Update: 2022-10-24 16:22 GMT

ಮಂಗಳೂರು : ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ವತಿಯಿಂದ ನಂತೂರ್ ಸಂದೇಶ ಪ್ರತಿಷ್ಠಾನದಲಿ ದೀಪಾವಳಿ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನರವರು, ವಿಶ್ವಾಸದಿಂದ ನಾವು ಪರರನ್ನು ಪ್ರಿತಿಸಿದಾಗ ಅದು ಬೆಳಕಿನ ಹಾಗೆ ಪ್ರಜ್ವಲಿಸುತ್ತದೆ. ಇಂದು ನಾವು ಕತ್ತಲ್ಲಲ್ಲಿ ಇದ್ದು ನಮ್ಮ ಧರ್ಮ ನಮ್ಮ ಸಂಸ್ಕೃತಿ ಮೇಲೆ ಎಂಬ ಭಾವನೆಯ ಸ್ಪರ್ಧಾತ್ಮಕ ಯುಗದಲ್ಲಿ ಇದ್ದೇವೆ. ಈ ಕತ್ತಲನ್ನು ಹೋಗಲಾಡಿಸಿ ನಾವೆಲ್ಲರು ಮನುಷ್ಯರು ನಮ್ಮ ಮಾನವಿಯವೇ ನಮ್ಮ ಧರ್ಮ ಎಂದು ಅರಿತಾಗ ಬೆಳಕು ಪ್ರಜ್ವಲಿಸುತ್ತದೆ. ಇದುವೇ ದೀಪಾವಳಿಯ ಉದ್ದೇಶ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳೂರು ವಿಶ್ವ ವಿದ್ಯಾನಿಲಯದ ಉಪಕುಲಪತಿ ಪ್ರೋ. ಸುಬ್ರಹ್ಮಣ್ಯ ಯಡಪಡಿತಾಯ ಮಾತನಾಡಿ  ಅಸೂಯೆ, ಕೋಪ, ಬಡತನ ಇವು ಕತ್ತಲೆಯಲ್ಲಿರುವ ಸಂಕೇತ ಪ್ರೀತಿ, ಪರಸ್ಪರ ಸಹಕಾರ ಬೆಳಕಿನ ಸಂಕೇತ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜಯ ಕರ್ನಾಟಕ ಮುಖ್ಯ ವರದಿಗಾರ ಮೊಹಮ್ಮದ್ ಅರೀಫ್ ಮಾತನಾಡಿ, ಪರಸ್ಪರ ಸಮಾಜವು ಇಂದು ಅಪನಂಬಿಕೆಯಿಂದು ಬದುಕುವುದ ನೋಡಬಹುದು. ಯಾವಾಗ ಈ ಅಪನಂಬಿಕೆಯಿಂದ ದೂರವಾಗಿ ಪರಸ್ಪರ ಸಹೋದರರಂತೆ ನಂಬಿಕೆಯಿಂದ ಬಾಳಿದಾಗ ದೀಪಾವಳಿ ಹಬ್ಬದ ನಿಜ ಅರ್ಥ ಬರುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವೇದಿಕೆ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋ ಸ್ವಾಗತಿಸಿ, ಪ್ರಸ್ತಾಪನೆಗೈದರು. ಈ ಸಂದರ್ಭ ಗೂಡು ದೀಪ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ  ವಂ. ಸುದೀಪ್ ಪೌಲ್, ಸಮಾಜ ಸೇವಕಿ ಮಂಜುಳಾ ನಾಯ್ಕ್, ಲಯನ್ಸ್ ಕ್ಲಬ್ ಬಿಜೈ ಕಾರ್ಯದರ್ಶಿ ತೋಮಸ್ ಸೈಮನ್ ಪಾಯ್ಸ್, ಮಾಜಿ ಮೇಯರ್ ಆಶ್ರಫ್, ವಕೀಲರಾದ ಯಶವಂತ ಮರೋಳಿ, ಕಥೋಲಿಕ್ ಸಭಾ ಅಧ್ಯಕ್ಷರಾದ ಸ್ಟೇನಿ ಲೋಬೊ, ದೇವದಾಸ್ ವಿಜಯ ಅಲ್ಪೇಡ್ ಉಪಸ್ಥಿತರಿದ್ದು, ಸುನಿಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿ ಪ್ಲೇವಿ ಡಿಸೋಜ ವಂದಿಸಿದರು.

ಸ್ವರಾಂಜಲಿ ಮ್ಯೂಸಿಕ್ ಶಾಲೆ ಎಕ್ಕೂರು  ಹಾಗೂ ವಂದನೀಯ ವಾಲ್ಟರ್ ಅಲ್ಬುಕರ್ಕ್ ಮೆಮೋರಿಯಲ್  ಕ್ವಾಯರ್ ಕಲಾ ನಾಟ್ಯ ಮುಗೇರ್ ಸರಿಗಮ ಟ್ರಸ್ಟ್  ಪಂಗಡಗಳಿಂದ ರಸ ಮಂಜರಿ ಕಾರ್ಯಕ್ರಮ ನಡೆಯಿತು. ಸಂಘಟನೆಯ ಪ್ರಮುಖರಾದ ಸುಶೀಲ್ ನೊರೊನ್ಹಾ, ಸ್ಟೇನಿ ಅಲ್ವಾರಿಸ್ , ಕಿಶೋರ್ ಫೆರ್ನಾಂಡಿಸ್  ಪ್ಲೇವಿ ಕ್ರಾಸ್ತಾ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News