​ಅ.28: ಕ್ರೂಸ್ ಆ್ಯಂಡ್‌ ಡೈನ್‌ನಲ್ಲಿ ಕೋಟಿ ಕಂಠ ಗಾಯನ

Update: 2022-10-27 14:18 GMT

ಮಂಗಳೂರು, ಅ.27: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ 67ನೇ ವರ್ಷದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಬೊಕ್ಕಪಟ್ಟಣದಲ್ಲಿರುವ ಬ್ರಹ್ಮ ಬಬ್ಬರ್ಯ ದೇವಸ್ಥಾನದ ಬಳಿಯಿರುವ ಕ್ರೂಸ್ ಆ್ಯಂಡ್‌ ಡೈನ್‌ನಲ್ಲಿ ಅ.28ರ ಬೆಳಗ್ಗೆ 10 ಕ್ಕೆ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಯಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು. ಕರಾವಳಿ ಭಾಗದ ಎಲ್ಲಾ ಜನಪ್ರತಿನಿಧಿಗಳು, ಗಾಯಕರು, ಪ್ರಮುಖರು, ಕ್ರೂಸ್‌ನಲ್ಲಿ ಸಾಗಿ ಸಮುದ್ರ, ನೇತ್ರಾವತಿ ಹಾಗೂ ಪಾಲ್ಗುಣಿ ನದಿ ಸೇರುವ ಸಂಗಮ ಜಾಗದಲ್ಲಿ ಕನ್ನಡ ನಾಡಗೀತೆ ಹಾಗೂ ಆಯ್ದ ಕನ್ನಡ ಹಾಡುಗಳನ್ನು ಹಾಡಲು ಉದ್ದೇಶಿಸಲಾಗಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News