ಅ.29: ದೇರಳಕಟ್ಟೆಯಲ್ಲಿ ಹುಬ್ಬುರ್ರಸೂಲ್ ಪ್ರವಚನ, ಶಂಸುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮ
Update: 2022-10-28 06:08 GMT
ದೇರಳಕಟ್ಟೆ, ಅ.28: ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆಯ ವತಿಯಿಂದ ಅ.29ರಂದು ರಾತ್ರಿ ಮಗ್ರಿಬ್ ನಮಾಝ್ ಬಳಿಕ ಬುರ್ದಾ ಮಜ್ಲಿಸ್, ಹುಬ್ಬುರ್ರಸೂಲ್ ಪ್ರವಚನ ಹಾಗೂ ಶಂಸುಲ್ ಉಲಮಾ ಅನುಸ್ಮರಣೆ ಮಜ್ಲಿಸ್ ಕಾರ್ಯಕ್ರಮ ದೇರಳಕಟ್ಟೆ ಗ್ರೀನ್ ಗ್ರೌಂಡ್ ನ ಮರ್ಹೂಂ ಮಿತ್ತಬೈಲ್ ಉಸ್ತಾದ್ ವೇದಿಕೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಉಸ್ಮಾನ್ ಫೈಝಿ ತೋಡಾರ್, ಸಯ್ಯದ್ ಅಮೀರ್ ತಂಙಳ್, ಸಯ್ಯದ್ ಅಕ್ರಂ ಅಲಿ ತಂಙಳ್, ಇಸ್ಹಾಕ್ ಫೈಝಿ, ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಮತ್ತಿತರರು ಭಾಗವಹಿಸಲಿದ್ದಾರೆ.
ಶೌಕತಲಿ ಮುಸ್ಲಿಯಾರ್ ವೆಲ್ಲಮುಂಡ ಮುಖ್ಯ ಪ್ರವಚನ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.