ದೇರಳಕಟ್ಟೆ : 9ನೆ ತರಗತಿಯ ವಿದ್ಯಾರ್ಥಿಗೆ ಹಲ್ಲೆ; ಪ್ರಕರಣ ದಾಖಲು
Update: 2022-10-29 09:35 GMT
ಉಳ್ಳಾಲ: ದೇರಳಕಟ್ಟೆ ಖಾಸಗಿ ಶಾಲೆಯ 9ನೆ ತರಗತಿಯ ವಿದ್ಯಾರ್ಥಿ ಮೇಲಂಗಡಿಯ ಅಬ್ದುಲ್ ಮನಾಫ್ ಎಂಬ ಬಾಲಕನಿಗೆ ಚೊಂಬುಗುಡ್ಡೆಯ ಇಬ್ಬರು ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಘಟನೆ ತೊಕ್ಕೊಟ್ಟುವಿನಲ್ಲಿ ನಡೆದಿದೆ.
ಗುರುವಾರ ಸಂಜೆ ಮನಾಫ್ ಶಾಲೆ ಬಿಟ್ಟು ಬಸ್ಸಿನಲ್ಲಿ ಬಂದು ತೊಕ್ಕೊಟುವಿನಲ್ಲಿ ಇಳಿದು ನಡೆದುಕೊಂಡು ಹೋಗುತ್ತಿದ್ದಾಗ ಇಬ್ಬರು ಸೇರಿ ಮನಾಫ್‌ಗೆ ಹಲ್ಲೆ ಮಾಡಿದ್ದು, ಇದರಿಂದ ಮನಾಫ್ ತಲೆ ಮತ್ತು ಕಣ್ಣಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಗಾಯಗೊಂಡ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.