ಉಳ್ಳಾಲ: ‘ಕುರ್‌ಆನ್ ನೆಡೆಗೆ ಮರಳಿರಿ’ ಅಭಿಯಾನದ ಸಾರ್ವಜನಿಕ ಸಭೆ
Update: 2022-10-29 14:09 GMT
ಮಂಗಳೂರು, ಅ.29: ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಅಕ್ಕರೆಕೆರೆ ವರ್ತುಲದಲ್ಲಿ ‘ಕುರುಆನ್‌ನೆಡೆಗೆ ಮರಳಿರಿ’ ಎಂಬ ರಾಷ್ಟ್ರೀಯ ಮಟ್ಟದ ಅಭಿಯಾನದ ಪ್ರಯುಕ್ತ ಸಾರ್ವಜನಿಕ ಕಾರ್ಯಕ್ರಮವು ಅಕ್ಕರೆಕೆರೆಯಲ್ಲಿ ಶುಕ್ರವಾರ ನಡೆಯಿತು.
ಬೋಳಂಗಡಿಯ ಹವ್ವಾ ಮಸೀದಿಯ ಖತೀಬ್ ಮೌಲಾನಾ ಯಹ್ಯಾ ತಂಳ್ ಮದನಿ ‘ಪ್ರವಾದಿ ಮುಹಮ್ಮದ್ (ಸ)ರನ್ನು ಅರಿಯಿರಿ ಎಂಬ ಕೇಂದ್ರೀಯ ವಿಷಯದಲ್ಲಿ ಮಾತನಾಡಿದರು. ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ವಲಯ ಕಾರ್ಯದರ್ಶಿ ಇಲ್ಯಾಸ್ ಇಸ್ಮಾಯಿಲ್, ಉಳ್ಳಾಲ ಶಾಖೆಯ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಕರೀಮ್, ಅಕ್ಕರೆಕೆರೆ ವರ್ತುಲದ ಸಂಚಾಲಕ ಉಮರ್ ಕೆ.ಯು. ಉಪಸ್ಥಿತರಿದ್ದರು.
ಸುಲ್ತಾನ್ ನಬೀಲ್ ಕಿರಾಅತ್ ಪಠಿಸಿದರು. ಸ್ಥಾನೀಯ ಕಾರ್ಯದರ್ಶಿ ಮುಝಮ್ಮಿಲ್ ಅಹ್ಮದ್ ಸ್ವಾಗತಿಸಿದರು. ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಶಾಖೆಯ ಸದಸ್ಯ ನಿಝಾಮುದ್ದೀನ್ ಉಮರ್ ಕಾರ್ಯಕ್ರಮ ನಿರೂಪಿಸಿದರು.