ಬ್ರಿಟನ್ ನೌಕಾಪಡೆಯಲ್ಲಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ: ತನಿಖೆಗೆ ಆದೇಶ
ಲಂಡನ್,ಅ.29: ಬ್ರಿಟಿಶ್ ಸೇನೆ(British Army)ಯ ಜಲಾಂತರ್ಗಾಮಿಗಳಲ್ಲಿ ಮಹಿಳಾ ಸಿಬ್ಬಂದಿಗೆ ವ್ಯಾಪಕವಾದ ಲೈಂಗಿಕ ಕಿರುಕುಳಗಳು ನಡೆಯುತ್ತಿರುವ ಆರೋಪಗಳ ಬಗ್ಗೆ ತನಿಖೆ ನಡೆಸುವುದಾಗಿ ಬ್ರಿಟನ್ ನೌಕಾಪಡೆ (British Navy)ಘೋಷಿಸಿದೆ.
ಜಲಾಂತರ್ಗಾಮಿಗಳಲ್ಲಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಗಳು ನಡೆಯಿತ್ತಿರುವುದಾಗಿ ಹಲವಾರು ಮಂದಿ ರಹಸ್ಯಭೇದಕರು (ವಿಶಲ್ ಬ್ಲೋವರ್ಸ್) ಆರೋಪಿಸಿದ್ದರು.
ನೌಕಾಪಡೆಯ ಮಾಜಿ ಲೆಫ್ಟಿನೆಂಟ್ ಸೋಫಿ ಬ್ರೂಕ್ (Lt. Sophie Brooke)ಅವರು ಇತ್ತೀಚೆಗೆ ಡೇಲಿ ಮೇಲ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ಬ್ರಿಟಿಶ್ ನೌಕಾಪಡೆಯ ಪುರುಷ ನಾವಿಕ ಸಿಬ್ಬಂದಿಯು ನಿರಂತರವಾಗಿ ಮಹಿಳೆಯರಿಗೆ ಲೈಂಗಿಕ ಹಲ್ಲೆಯ ಬೆದರಿಕೆಯೊಡ್ಡುತ್ತಿರುತ್ತಾರೆ ಎಂದು ಆರೋಪಿಸಿದ್ದರು.
ನೌಕಾಪಡೆಯ ವೃತ್ತಿಪರ ವರಿಷ್ಠರಾದ ಲಾರ್ಡ್ ಬೆನ್ಕೇ ಅವರು ಈ ಬಗ್ಗೆ ಶನಿವಾರ ಪತ್ರಿಕೆಯೊಂದಕ್ಕೆ ಹೇಳಿಕೆಯನ್ನು ನೀಡಿದ್ದು, ಹಿರಿಯ ಅಧಿಕಾರಿಗಳ ತಂಡವೊಂದು ಆರೋಪಗಳ ನಡೆಸಲಿದೆ ಎಂದರು. ಇಂತಹ ಅಸಹ್ಯಕರ ಆರೋಪಗಳಿಂದ ತಾನು ತೀವ್ರವಾಗಿ ಕಳವಳಗೊಂಡಿರುವುದಾಗಿ ಅವರು ಹೇಳಿದ್ದಾರೆ.
ಬ್ರಿಟನ್ ನೌಕಾಪಡೆಯಲ್ಲಿ ಲೈಂಗಿಕ ಹಲ್ಲೆ ಹಾಗೂ ಕಿರುಕುಳಕ್ಕೆ ಯಾವುದೇ ಸ್ಥಾನವಿಲ್ಲ ಹಾಗೂ ಅದನ್ನು ಎಂದಿಗೂ ಸಹಿಸಲಾಗದು ಎಂದು ಕೇ ತಿಳಿಸಿದ್ದಾರೆ. ಇಂತಹ ಪ್ರಕರಣಗಳಲ್ಲಿ ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅವರ ಶ್ರೇಣಿಯನ್ನು ಪರಿಗಣಿಗೆ ತೆಗೆದುಕೊಳ್ಳದೆ ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಅವರು ಹೇಳಿದ್ದಾರೆ.
ಸಬ್ಮೆರೈನ್ ನೌಕೆಯ ಕಮಾಂಡರ್ ಹುದ್ದೆಯನ್ನು ಆಲಂಕರಿಸಬೇಕಾಗಿದ್ದ 30 ವರ್ಷ ವಯಸ್ಸಿನ ಬ್ರೂಕ್ ಅವರು ಲೈಂಗಿಕ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶ್ರಮಿಸಿದ್ದರು ಹಾಗೂ ತನಗೆ ತಾನೇ ಹಾನಿ ಮಾಡಿಕೊಂಡಿದ್ದರೆನ್ನಲಾಗಿದೆ. ಆನಂತರ ಅವರನ್ನು ನೌಕಾಪಡೆಯಿಂದ ವಜಾಗೊಳಿಸಲಾಗಿತ್ತು. ತನ್ನ ಪುರುಷ ಮೇಲಾಧಿಕಾರಿಗಳು ತನ್ನೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿದ್ದರು ಎಂದು ಬ್ರೂಕ್ ಸಂದರ್ಶನದಲ್ಲಿ ಆರೋಪಿಸಿದ್ದಳು. ಅಲ್ಲದೆ ಅತ್ಯಾಚಾರವೆಸಗಬಹುದಾದ ಮಹಿಳಾ ಸಿಬ್ಬಂದಿಯ ಪಟ್ಟಿಯನ್ನು ಕೂಡಾ ಪುರುಷ ನಾವಿಕ ಸಿಬ್ಬಂದಿ ಸಿದ್ಧಪಡಿಸಿದ್ದು, ಆದರಲ್ಲಿ ತಾನು ಆರನೇಯ ಸ್ಥಾನದಲ್ಲಿದ್ದೆ ಎಂದು ಬ್ರೂಕ್ ಸಂದರ್ಶನದಲ್ಲಿ ತಿಳಿಸಿದ್ದರು.