ಸುಳ್ಯ: ಹತ್ತು ದಿನದ ಮಗುವನ್ನು ಬಾವಿಗೆ ಎಸೆದ ತಾಯಿ; ಪ್ರಕರಣ ದಾಖಲು
Update: 2022-10-29 17:23 GMT
ಸುಳ್ಯ: ಹತ್ತು ದಿನದ ಮಗುವನ್ನು ಬಾವಿಗೆ ಎಸೆದ ಪರಿಣಾಮ ಮಗು ಮೃತಪಟ್ಟ ಘಟನೆ ಪಂಜ ಸಮೀಪದ ಕೂತ್ಕುಂಜ ಗ್ರಾಮದ ಬಸ್ತಿ ಕಾಡು ಎಂಬಲ್ಲಿ ಇಂದು ಸಂಜೆ ವರದಿಯಾಗಿದೆ.
ಪವಿತ್ರ ಎಂಬಾಕೆ ಮಗುವನ್ನು ಬಾಯಿಗೆ ಎಸೆದ ತಾಯಿ ಎಂದು ಗುರುತಿಸಲಾಗಿದೆ. ಆಕೆ ಕೆಲವು ಸಮಯದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಇತ್ತೀಚೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯಲ್ಲಿ ಯಾರು ಇಲ್ಲದ ವೇಳೆ ಘಟನೆ ನಡೆದಿದೆ ಎಂದು ದೂರಲಾಗಿದೆ. ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.