ಬಿ.ಸಿ.ರೋಡ್: ಕನ್ನಡ ರಾಜ್ಯೋತ್ಸವಕ್ಕೆ ಶುಭಕೋರಿದ್ದ ಎಸ್.ಡಿ.ಪಿ.ಐ. ಬ್ಯಾನರ್ ಗೆ ಹಾನಿ
Update: 2022-10-30 08:24 GMT
ಬಂಟ್ವಾಳ, ಅ.30: ಬಿ.ಸಿ.ರೋಡಿನ ಶ್ರೀ ನಾರಾಯಣ ಗುರು ವೃತ್ತದ ಬಳಿ ಎಸ್.ಡಿ.ಪಿ.ಐ. ವತಿಯಿಂದ ಕನ್ನಡ ರಾಜ್ಯೋತ್ಸವಕ್ಕೆ ಶುಭಾಶಯಗಳನ್ನು ಕೋರಿ ಹಾಕಿದ್ದ ಬ್ಯಾನರನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿದ್ದಾರೆ.
ಶನಿವಾರ ರಾತ್ರಿ ಹಾಕಲಾಗಿದ್ದ ಈ ಫ್ಲೆಕ್ಸ್ ನಲ್ಲಿ, ಎಸ್.ಡಿ.ಪಿ.ಐ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಅವರಿಂದ ಕನ್ನಡ ರಾಜ್ಯೋತ್ಸವಕ್ಕೆ ಶುಭಾಶಯ ಎಂದು ಉಲ್ಲೇಖವಾಗಿತ್ತು. ರವಿವಾರ ಬೆಳಗ್ಗೆ ಬ್ಯಾನರ್ ಹರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬ್ಯಾನರ್ ಹರಿದ ದುಷ್ಕರ್ಮಿಗಳನ್ನು ಶೀಘ್ರ ಪತ್ತೆ ಹಚ್ಚಿ ಬಂಧಿಸಬೇಕೆಂದು ಎಸ್.ಡಿ.ಪಿ.ಐ. ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಆಗ್ರಹಿಸಿದೆ.