ಮಂಗಳೂರು ವಿವಿ ಸಂಧ್ಯಾ ಕಾಲೇಜಿನಿಂದ ಫಿಟ್ ಇಂಡಿಯಾ 3.0 ಕಾಲ್ನಡಿಗೆ ಜಾಥಾ

Update: 2022-10-30 10:04 GMT

ಮಂಗಳೂರು, ಅ.30: ಮಂಗಳೂರು ವಿ.ವಿ. ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ 'ಫಿಟ್ ಇಂಡಿಯಾ 3.0' ಕಾಲ್ನಡಿಗೆ ಜಾಥಾ ಇಂದು ಲಾಲ್ ಭಾಗ್ ಮಹಾತ್ಮಾ ಗಾಂಧಿ ವೃತ್ತದಿಂದ ಹಂಪನಕಟ್ಟೆ ಕ್ಲಾಕ್ ಟವರ್ ತನಕ ಜರುಗಿತು.

 ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ನಾಗರತ್ನಾ ಕೆ.ಎ. ಜಾಥಾಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಉತ್ತಮ ಆರೋಗ್ಯ ಸ್ವಚ್ಛ ಮನಸ್ಸು ಇದರ ಪರಿಕಲ್ಪನೆಯಾಗಿರುವ ಫಿಟ್ ಇಂಡಿಯಾ ರನ್ ಆರೋಗ್ಯ ವಂತ ಸಮಾಜದ ನಿರ್ಮಾಣಕ್ಕೆ ಪೂರಕವಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಸುಭಾಷಿನಿ ಶ್ರೀವತ್ಸ, ರಾ.ಸೆ.ಯೋ ಯೋಜನಾಧಿಕಾರಿ ಅಶೋಕನ್, ಕಾಲೇಜಿನ ಉಪನ್ಯಾಸಕ ವೃಂದ, ರಾಸೆಯೋ ಸೇವಕರು, ಸೇವಕಿಯರು, ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

Similar News