ಬಂಟ್ವಾಳ: ಶುಚಿಗೊಳಿಸಲೆಂದು ಬಾವಿಗೆ ಇಳಿದಿದ್ದ ವೇಳೆ ಅಸ್ವಸ್ಥಗೊಂಡ ವ್ಯಕ್ತಿಯ ರಕ್ಷಣೆ

Update: 2022-10-31 15:41 GMT

ಬಂಟ್ವಾಳ: ಬಿ.ಸಿ.ರೋಡಿಗೆ ಸಮೀಪದ ಗಾಣದಪಡ್ಪುವಿನಲ್ಲಿ ಬಿ.ವಾಸು ಪೂಜಾರಿ ಎಂಬವರು ಮನೆಯ ಬಾವಿ ಶುಚಿಗೊಳಿಸಲೆಂದು ಇಳಿದಿದ್ದ ವೇಳೆ ಬಾವಿಯೊಳಗೆ ಅಸ್ವಸ್ಥಗೊಂಡ ಘಟನೆ ನಡೆದಿದ್ದು, ನಂತರ ಬಂಟ್ವಾಳ ಅಗ್ನಿಶಾಮಕ ಠಾಣೆಯ ತಂಡ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಅವರನ್ನು ಮೇಲಕ್ಕೆತ್ತಿ ರಕ್ಷಿಸಿರುವ ಘಟನೆ ಸೋಮವಾರ ನಡೆದಿದೆ.

ಅಗ್ನಿಶಾಮಕದಳದ ಸಿಬ್ಬಂದಿ ನಂದಪ್ಪ ನಾಯ್ಕೋಡಿಯರವರು ಬಾವಿಗೆ ಇಳಿದು ಬಿ.ವಾಸು ಪೂಜಾರಿಯವರನ್ನು ಯಾವುದೇ ಪ್ರಾಣಾಪಾಯವಿಲ್ಲದೆ  ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಟ್ವಾಳ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಯು.ರವೀಂದ್ರ, ಸಿಬ್ಬಂದಿ ಪುರುಷೋತ್ತಮ, ರೋಹಿತ್, ರುಕ್ಕಯ್ಯ ಅಮೀನ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಜಯಗಣೇಶ್ ಮತ್ತಿತರರು ಕಾರ್ಯಚರಣೆಯಲ್ಲಿದ್ದರು.

ಇದನ್ನೂ ಓದಿ| ಬೆಳ್ತಂಗಡಿ: ವಿದ್ಯುತ್ ತಂತಿ ತಗುಲಿ ಓರ್ವ ಮೃತ್ಯು

Similar News