ಮೂಡುಬಿದಿರೆ: ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

Update: 2022-10-31 15:44 GMT

ಮೂಡುಬಿದಿರೆ: ಇಲ್ಲಿನ ಮೂಡುಕೊಣಾಜೆ ನಿವಾಸಿ ರವಿ ಪೂಜಾರಿ (55) ಎಂಬವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸೋಮವಾರ ಸಾಯಂಕಾಲ ಬೆಳಕಿಗೆ ಬಂದಿದೆ.

ಮೂಡುಕೊಣಾಜೆಯ ಕುಕ್ಕುದಕಟ್ಟೆ ನಿವಾಸಿ ರವಿ ಪೂಜಾರಿಯವರು ಹಲವು ವರ್ಷಗಳಿಂದ ಚಾಲಕರಾಗಿ ಕೆಲಸ ನಿರ್ವಹಿಸಿದ್ದು, ಅನಾರೋಗ್ಯದ ಕಾರಣ ಕೆಲಸವನ್ನು ಬಿಟ್ಟಿದ್ದರು. ಅನಾರೋಗ್ಯ ಕಾರಣದಿಂದ ಅವರು ತಮ್ಮ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News