ಚೀನಾವನ್ನು ಹತ್ತಿಕ್ಕುವ ಪ್ರಯತ್ನವನ್ನು ಅಮೆರಿಕ ನಿಲ್ಲಿಸಬೇಕು: ವಾಂಗ್ ಯಿ

Update: 2022-10-31 16:54 GMT

ಬೀಜಿಂಗ್, ಅ.31: ಚೀನಾವನ್ನು ನಿಗ್ರಹಿಸುವ ಮತ್ತು ನಿಯಂತ್ರಿಸುವ ಪ್ರಯತ್ನವನ್ನು ಅಮೆರಿಕ ನಿಲ್ಲಿಸಬೇಕು ಮತ್ತು ಸಂಬಂಧಕ್ಕೆ ಅಡೆತಡೆ ಸೃಷ್ಟಿಸುವುದನ್ನು ತಪ್ಪಿಸಬೇಕು ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ(Wang Yi) ಹೇಳಿದ್ದಾರೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರೊಂದಿಗೆ ಫೋನ್ನಲ್ಲಿ ಮಾತನಾಡಿದ ವಾಂಗ್ `ಚೀನಾದ ಮೇಲೆ ಅಮೆರಿಕ ಹೇರಿದ ರಫ್ತು ನಿಯಂತ್ರಣಗಳು ಚೀನಾದ ಕಾನೂನುಬದ್ಧ ಹಕ್ಕಿಗೆ ಹಾನಿಯೆಸಗಿದೆ' ಎಂದು ಸ್ಪಷ್ಟಪಡಿಸಿರುವುದಾಗಿ ಚೀನಾದ ವಿದೇಶಾಂಗ ಇಲಾಖೆ ಹೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಬ್ಲಿಂಕೆನ್ 'ಉಭಯ ದೇಶಗಳ ಸಂಬಂಧವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವ ಅಗತ್ಯವಿದೆ. ಎರಡೂ ದೇಶಗಳ ನಡುವೆ ಸಂವಹನದ ಮುಕ್ತ ಮಾರ್ಗವನ್ನು ಕಾಪಾಡಿಕೊಳ್ಳುವ ಮತ್ತು ಮುಂದುವರಿಸುವ ಅಗತ್ಯವನ್ನು ಅಮೆರಿಕ ಪದೇ ಪದೇ ಒತ್ತಿಹೇಳಿದೆ. ಜತೆಗೆ, ಉಕ್ರೇನ್ ಮೇಲಿನ ರಶ್ಯದ ಆಕ್ರಮಣವನ್ನು ಚೀನಾ ಬೆಂಬಲಿಸಿದರೆ ಆಗುವ ಪರಿಣಾಮವನ್ನೂ ಎತ್ತಿ ತೋರಿಸಿದೆ' ಎಂದು ಹೇಳಿರುವುದಾಗಿ ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. 

Similar News