ಗಾಯಕ ಆರೊನ್ ಕಾರ್ಟರ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Update: 2022-11-06 06:35 GMT

ಲಾಸ್ ಏಂಜಲೀಸ್: ತನ್ನ ಹಿಟ್ ಆಲ್ಬಂ "ಆರೊನ್ಸ್ ಪಾರ್ಟಿ (ಕಮ್ ಗೆಟ್ ಇಟ್)" ನಿಂದ  ಖ್ಯಾತಿ ಗಳಿಸಿದ್ದ ಅಮೆರಿಕದ ಯುವ ಗಾಯಕ ಆರೊನ್ ಕಾರ್ಟರ್ Singer Aaron Carter  ಶನಿವಾರ ನಿಧನರಾದರು ಎಂದು ಟಿಎಂಝೆಡ್ ಹೇಳಿದೆ. ಕಾರ್ಟರ್ ಅವರಿಗೆ 34 ವರ್ಷ ವಯಸ್ಸಾಗಿತ್ತು.

ಬ್ಯಾಕ್‌ಸ್ಟ್ರೀಟ್ ಬಾಯ್ ನಿಕ್ ಕಾರ್ಟರ್ ಅವರ ಸಹೋದರ ಆರೊನ್ ಕ್ಯಾಲಿಫೋರ್ನಿಯಾದ ಲ್ಯಾಂಕಾಸ್ಟರ್‌ನಲ್ಲಿರುವ ತನ್ನ ನಿವಾಸದಲ್ಲಿ ಬಾತ್ ಟಬ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಮನರಂಜನಾ ಔಟ್‌ಲೆಟ್ ವರದಿ ಮಾಡಿದೆ.

10:58 ಕ್ಕೆ ಕಾರ್ಟರ್‌ನ ಮನೆಗೆ ಅಧಿಕಾರಿಗಳು ತೆರಳಿದರು ಮೃತದೇಹವನ್ನು ಪತ್ತೆ ಹಚ್ಚಿದರು. ಆದರೆ ವ್ಯಕ್ತಿಯನ್ನು ಸಾರ್ವಜನಿಕವಾಗಿ ಗುರುತಿಸಲು ಇನ್ನೂ ಸಾಧ್ಯವಾಗಲಿಲ್ಲ ಎಂದು ಪೊಲೀಸ್ ವಕ್ತಾರರು AFP ಗೆ ತಿಳಿಸಿದರು.

ಸುದ್ದಿಸಂಸ್ಥೆ AFP ಪ್ರಶ್ನೆಗೆ ಕಾರ್ಟರ್‌ನ ಮ್ಯಾನೇಜರ್ ತಕ್ಷಣ ಪ್ರತಿಕ್ರಿಯಿಸಲಿಲ್ಲ.

ಡಿಸೆಂಬರ್ 7, 1987 ರಂದು ಫ್ಲೋರಿಡಾದ ಟ್ಯಾಂಪಾದಲ್ಲಿ ಜನಿಸಿದ ಆರೊನ್ ಕಾರ್ಟರ್  ಏಳನೇ ವಯಸ್ಸಿನಲ್ಲಿ ಪ್ರದರ್ಶನ ನೀಡಲು ಆರಂಭಿಸಿದರು.  1997 ರಲ್ಲಿ ತನ್ನ ಒಂಬತ್ತನೇ ವಯಸ್ಸಿನಲ್ಲಿ ತನ್ನ ಮೊದಲ ಆಲ್ಬಂ ಅನ್ನು ಬಿಡುಗಡೆ ಮಾಡಿದ್ದರು.

Similar News