ತುಂಬೆ ಗ್ರೂಪ್ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್‌ರಿಗೆ "ವಿಶ್ವ ಮಾನ್ಯ" ಪ್ರಶಸ್ತಿ
Update: 2022-11-20 06:36 GMT
ದುಬೈ: ತುಂಬೆ ಗ್ರೂಪ್ ಸ್ಥಾಪಕ ಅಧ್ಯಕ್ಷರಾದ ಡಾ. ತುಂಬೆ ಮೊಯ್ದೀನ್ ( Founder President Thumbay Group) ಅವರಿಗೆ "ವಿಶ್ವ ಮಾನ್ಯ" (VISHWA MANYA) ಪ್ರಶಸ್ತಿ ನೀಡಿ ಶನಿವಾರ ಗೌರವಿಸಲಾಯಿತು.
ದುಬೈನ ಶೇಖ್ ರಾಶಿದ್ ಆಡಿಟೋರಿಯಂನಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ (Karnataka Press Club Counsel - KPCC) ಸಹಯೋಗದೊಂದಿಗೆ ʼಕನ್ನಡಿಗರು ದುಬೈʼ (Kannadigaru Dubai) ಆಯೋಜಿಸಿದ ವಿಶ್ವ ಕನ್ನಡ ಹಬ್ಬದ (Vishwa Kannada Habba) ಸಂದರ್ಭದಲ್ಲಿ ಮೈಸೂರು ರಾಜ ಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಆನಂದ್ ಗುರೂಜಿ ಅವರಿಂದ "ವಿಶ್ವ ಮಾನ್ಯ" ಪ್ರಶಸ್ತಿಯನ್ನು ಡಾ. ತುಂಬೆ ಮೊಯ್ದೀನ್ ಸ್ವೀಕರಿಸಿದರು.