ಜುಬೈಲ್‌ನಲ್ಲಿ 'ವಿಮೆನ್ಸ್ ಎಜುಕೇಶನ್ ಕೌನ್ಸಿಲ್' ಸಾಕ್ಷ್ಯಚಿತ್ರ ಬಿಡುಗಡೆ
ಜುಬೈಲ್: ಮಹಿಳೆಯರ ಧಾರ್ಮಿಕ ಶಿಕ್ಷಣ ಮತ್ತು ವಿವಿಧ ತರಬೇತಿಗಳಿಗಾಗಿ ರೂಪಿಸಲ್ಪಟ್ಟ 'ವಿಮೆನ್ಸ್ ಇಸ್ಲಾಮಿಕ್ ಎಜುಕೇಶನ್ ಕೌನ್ಸಿಲ್ (ರಿ)' ಇದರ ಸಾಕ್ಷ್ಯಚಿತ್ರದ ಬಿಡುಗಡೆ ಕಾರ್ಯಕ್ರಮವು ಸೌದಿ ಅರೇಬಿಯಾದ ಜುಬೈಲ್ ಕೆಸಿಎಫ್ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು ಕೇಂದ್ರವಾಗಿ ಕಾರ್ಯಾಚರಣೆ ಮಾಡುವ ಕೌನ್ಸಿಲ್‌ನ ವತಿಯಿಂದ ಮಹಿಳಾ ಶರೀಅತ್ ಕಾಲೇಜುಗಳ ಪಠ್ಯ ಪುಸ್ತಕ ಹಾಗೂ ಟ್ರೈನಿಂಗ್ ಅಲ್ಲದೆ ಆನ್‌ಲೈನ್ ಇಸ್ಲಾಮೀ ಶಿಕ್ಷಣ ನೀಡುವ 'ಖಮರಿಯಾ ಕೋರ್ಸ್', ಕುರ್ ಆನ್ ಪಾರಾಯಣ ತರಬೇತಿ ನೀಡುವ 'ಅಲ್ ಮುಜವ್ವಿದಾ' ಕೋರ್ಸ್‌ಗಳನ್ನೂ ನಡೆಸಲಾಗುತ್ತದೆ.
ಮರ್ಕಝುಲ್ ಹುದಾ ಮಹಿಳಾ ಕಾಲೇಜು ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಮುಹಮ್ಮದ್ ಫಾರೂಖ್ ಕನ್ಯಾನ ಡಾಕ್ಯುಮೆಂಟರಿ ಬಿಡುಗಡೆ ಮಾಡಿದರು.
'ವಿಮೆನ್ಸ್ ಇಸ್ಲಾಮಿಕ್ ಎಜುಕೇಶನ್ ಕೌನ್ಸಿಲ್' ಅಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್, ಕೆಸಿಎಫ್ ಜುಬೈಲ್ ಝೋನ್ ಅಧ್ಯಕ್ಷ ಅಬ್ದುಲ್ ಅಝೀಝ್ ಸಅದಿ ಕುಡ್ತಮುಗೇರು, ಮರ್ಕಝುಲ್ ಹುದಾ ಸೌದಿ ಅರೇಬಿಯಾದ ಮುಖಂಡರಾದ ನೌಶಾದ್ ಪೋಲ್ಯ, ಅಬ್ದುಲ್ ಹಮೀದ್ ಅರಮೆಕ್ಸ್, ಶಂಸುದ್ದೀನ್ ಬೈರಿಕಟ್ಟೆ, ಮುಹಮ್ಮದ್ ಅಲಿ ನೆಕ್ಕಿಲಾಡಿ, ಡಿಕೆಎಸ್ಸಿ ಸಂಚಾಲಕ ಇಸ್ಮಾಯಿಲ್ ಮುಸ್ಲಿಯಾರ್ ಮುಂತಾದವರು ಭಾಗವಹಿಸಿದರು.
ಕೆಸಿಎಫ್ ಅಂತಾರಾಷ್ಟ್ರೀಯ ಮುಖಂಡರಾದ ಹಾಜಿ ಅಬೂಬಕರ್ ರೈಸ್ಕೋ, ಖಮರುದ್ದೀನ್ ಗೂಡಿನಬಳಿ ಶುಭ ಹಾರೈಸಿದರು
ಖಮರಿಯಾ ಅಕಾಡೆಮಿ ಹಳೆ ವಿದ್ಯಾರ್ಥಿನಿ ಹನಾನ ಅಬೂಬಕರ್ ಅಲ್ ಖಮರಿಯಾ ರೈಸ್ಕೋ ಈ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ.
ಕಾರ್ಯಕ್ರಮದಲ್ಲಿ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು ಸ್ವಾಗತಿಸಿ ರಫೀಖ್ ಶಿಬರೂರು ಧನ್ಯವಾದ ಸಲ್ಲಿಸಿದರು.