ಉಡುಪಿ ನಗರಸಭೆಯಿಂದ ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ

Update: 2022-12-07 12:05 GMT

ಉಡುಪಿ: ನಗರದ ವಿವಿಧೆಡೆ ಇಂದು ಕಾರ್ಯಾಚರಣೆ ನಡೆಸಿದ ನಗರ ಸಭೆ ಅಧಿಕಾರಿಗಳ ತಂಡ ಸುಮಾರು 10-15 ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದ್ದಾರೆ.

ಕಳೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆ ಹಾಗೂ ಸಾರ್ವ ಜನಿಕರ ದೂರಿನ ಹಿನ್ನೆಲೆಯಲ್ಲಿ ಉಡುಪಿ ಪೌರಾಯುಕ್ತ ಡಾ.ಉದಯ ಕುಮಾರ್ ಶೆಟ್ಟಿ ಸೂಚನೆಯಂತೆ ಅಧಿಕಾರಿಗಳ ತಂಡ ಬನ್ನಂಜೆ, ಉಡುಪಿ ಸರ್ವಿಸ್ ಹಾಗೂ ಸಿಟಿಬಸ್ ನಿಲ್ದಾಣ ಸೇರಿದಂತೆ ನಗರದ ವಿವಿಧೆಡೆ ಫುಟ್ ಪಾತ್‌ಗಳಲ್ಲಿ ವ್ಯಾಪಾರ ಮಾಡುತ್ತಿದ್ದ ಬೀದಿವ್ಯಾಪಾರಿಗಳನ್ನು ತೆರವುಗೊಳಿಸಿದ್ದಾರೆ.

ತೆರವುಗೊಳಿಸಲು ಒಪ್ಪದ ಬೀದಿ ವ್ಯಾಪಾರಿಗಳ ಹಣ್ಣು, ತರಕಾರಿ ಸೇರಿದಂತೆ ವಿವಿಧ ಸೊತ್ತುಗಳನ್ನು ನಗರಸಭೆ ಸಿಬ್ಬಂದಿಗಳೇ ತೆರವು ಮಾಡಿ ವಾಹನಗಳಿಗೆ ತುಂಬಿಸಿಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಉಡುಪಿ ನಗರಸಭೆಯ ಆರೋಗ್ಯ ಅಧಿಕಾರಿಗಳಾದ ಕರುಣಾಕರ್ ಹಾಗೂ ಶಶಿರೇಖಾ ಹಾಜರಿದ್ದರು.

‘ಅಧಿಕಾರಿಗಳು ಮುಂಚಿತವಾಗಿ ವ್ಯಾಪಾರಿಗಳಿಗೆ ಯಾವುದೇ ನೋಟಿಸ್ ನೀಡದೆ ಪೋಲಿಸ್ ಸಹಾಯ ಪಡೆದು ತಳ್ಳುಗಾಡಿ, ಬಟ್ಟೆ, ಹಣ್ಣು ಹಂಪಲು, ತರಕಾರಿ ಸುಮಾರು 40 ಸಾವಿರಕ್ಕೂ ಮಿಕ್ಕಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಕೆಲವು ವಸ್ತುಗಳನ್ನು ಹಾಳುಗೆಡವಿದ್ದಾರೆ. ಇದನ್ನು ತಡೆಯಲು ಹೋದಾಗ ವ್ಯಾಪಾರಿಗೆ ನಗರಸಭೆ ಸಿಬ್ಬಂದಿ ದೂಡಿ ಹಲ್ಲೆ ನಡೆಸಿದ್ದಾರೆ. ಈ ರೀತಿ ಬಡವ್ಯಾಪಾರಿಗಳಿಗೆ ನಿರಂತರವಾಗಿ ನಗರಸಭೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ’ ಎಂದು ಉಡುಪಿ ಜಿಲ್ಲಾ ಬೀದಿ ಬದಿ ವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ಕವಿರಾಜ್ ಎಸ್. ಆರೋಪಿಸಿದ್ದಾರೆ.

ನಿಯೋಗದಿಂದ ಪೌರಾಯುಕ್ತರ ಭೇಟಿ

ಸಂಘದ ಗೌರವಾಧ್ಯಕ್ಷ ಹಾಗೂ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಕವಿರಾಜ್ ಎಸ್. ನೇತೃತ್ವದ ಬೀದಿಬದಿ ವ್ಯಾಪಾರಿಗಳ ನಿಯೋಗ ನಗರಸಭೆ ಪೌರಾಯುಕ್ತರು ಹಾಗೂ ಮುಖ್ಯ ಆರೋಗ್ಯ ಅಧಿಕಾರಿಗಳನ್ನು ಭೇಟಿ ಮಾಡಿ ಕೆಲವು ಮುಖ್ಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿತು. ಬೀದಿಬದಿ ವ್ಯಾಪಾರಿಗಳ ಬೇಡಿಕೆಗಳ ಕುರಿತು ಮನವಿಯನ್ನು ಸಲ್ಲಿಸುವಂತೆ ಪೌರಾಯುಕ್ತರು ನಿಯೋಗಕ್ಕೆ ತಿಳಿಸಿದರು.

ಇಂದು ನಡೆದ ಕಾರ್ಯಾಚರಣೆ ದೊಡ್ಡ ಅಂಗಡಿಗಳ ಮಾಲಕರ ಕುಮ್ಮಕ್ಕಿ ನಿಂದ ನಡೆದಿರುವುದು ಸ್ಪಷ್ಟವಾಗಿದೆ. ಒಂದು ಕಡೆ ಸರಕಾರ ಬೀದಿಬದಿ ವ್ಯಾಪಾರಿ ಗಳಿಗೆ ಹಲವು ಯೋಜನೆಗಳನ್ನು ಜಾರಿ ತರುತ್ತಿದೆ. ಅದರೆ ಇಲ್ಲಿ ನಗರಸಭೆ ಅಧಿಕಾರಿಗಳು ಅಂಗಡಿ ಮಾಲಕರ ಪರ ನಿಂತು ಬೀದಿಬದಿ ವ್ಯಾಪಾರಿಗಳಿಗೆ ನಿರಂತರ ತೊಂದರೆ ನೀಡುತ್ತಿದ್ದಾರೆ. ಮುಂದಕ್ಕೆ ಈ ರೀತಿ ದಬ್ಬಾಳಿಕೆ ಮಾಡಿದರೆ  ನಗರಸಭೆ ಮುಂದೆ ತೀವ್ರ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು  ಕವಿರಾಜ್ ಎಸ್. ಎಚ್ಚರಿಕೆ ನೀಡಿದ್ದಾರೆ.

ಉಡುಪಿ ನಗರ ವ್ಯಾಪ್ತಿಯಲ್ಲಿ ಕಟ್ಟಡ, ಅಂಗಡಿಗಳಿಗೆ ಪರವಾನಿಗೆ ನೀಡ ಲಾಗಿದೆ. ಆದರೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ವಾಹನಗಳನ್ನು ರಸ್ತೆಯಲ್ಲಿ ಫುಟ್ ಬೋರ್ಡುಗಳ ಮೇಲೆಯೇ ಇದೆ. ಇದರ ಬಗ್ಗೆ ನಗರಸಭೆ ಕ್ರಮಕೈಗೊ ಳ್ಳುದಿಲ್ಲ. ಕೆಲವು ಹೋಟೆಲ್ ಮಾಲಕರು ಕಸಗಳನ್ನು ರಸ್ತೆ ಬದಿ ಹಾಕುತ್ತಾರೆ. ಖಾಸಗಿ ಬಸ್ ನಿಲ್ದಾಣದಲ್ಲಿ ಕೆಲವು ಅಂಗಡಿ ಮಾಲಕರು ಸ್ವಚ್ಛತೆಯನ್ನು ಕಾಪಾಡುವುದಿಲ್ಲ. ಇಂತಹ ಸುಮಾರು ಸಮಸ್ಯೆಗಳು ಇವೆ. ಇದರ ಬಗ್ಗೆ ನಗರಸಭೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

Similar News