ಯೆನೆಪೋಯ ವಿದ್ಯಾ ಸಂಸ್ಥೆಯಲ್ಲಿ MEIF ವತಿಯಿಂದ ಮಂಗಳೂರು ಝೋನಲ್ ಅಂತರ್ ಶಾಲಾ ಪ್ರತಿಭಾ ಸ್ಪರ್ಧೆ

Update: 2022-12-31 12:46 GMT

ಮಂಗಳೂರು: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ  ದ.ಕ ಹಾಗೂ ಉಡುಪಿ  ಜಿಲ್ಲೆ (MEIF ) ವತಿಯಿಂದ 5 ನೇ ಹಾಗೂ ಝೋನ್ ಮಟ್ಟದ  ಕೊನೆಯ ಪ್ರತಿಭಾ ಸ್ಪರ್ಧೆ ಮಂಗಳೂರು ಝೋನಲ್ 'Talent Hunt -2022 -23' ಸ್ಪರ್ಧೆ ಶನಿವಾರ ಜೆಪ್ಪಿನಮೊಗರಿನ ಯೆನೆಪೋಯ ವಿದ್ಯಾ ಸಂಸ್ಥೆಯಲ್ಲಿ ನಡೆಯಿತು. 

ಕಾರ್ಯಕ್ರಮವನ್ನು ವಿದ್ಯಾ ಸಂಸ್ಥೆಯ ನಿರ್ದೇಶಕಿ ಮಿಶ್ರಿಯಾ ಜಾವಿದ್ ಉದ್ಘಾಟಿಸಿದರು.

ಮಂಗಳೂರು ಝೋನಲ್ ಉಪಾಧ್ಯಕ್ಷರಾದ ಬಿ .ಎಂ ಮುಮ್ತಾಝ್ ಅಲಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  MEIF ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ವಹಿಸಿದರು.  

ಯೆನೆಪೋಯ  ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಉಜ್ವಲ್ ಸ್ವಾಗತಿಸಿದರು. ಕ್ರಿಶಾ ಕಾರ್ಯಕ್ರಮ ನಿರೂಪಿಸಿದರು.

MEIF ಮಂಗಳೂರು ಝೋನಲ್ ಕನ್ವೀನರ್ ಮುಹಮ್ಮದ್ ಶಾರಿಕ್  ಪ್ರತಿಭಾ ಸ್ಪರ್ಧೆಗಳನ್ನು ಸಂಯೋಜಿಸಿದರು.  ನಿಸ್ಸಾರ್ ಫಕೀರ್ ಮುಹಮ್ಮದ್ ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಮಂಗಳೂರು ನಗರ ಹಾಗೂ ಗ್ರಾಮೀಣ ವ್ಯಾಪ್ತಿಯ 26 MEIF ವಿದ್ಯಾ ಸಂಸ್ಥೆಗಳ 135 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿಜೇತರಿಗೆ ಪ್ರಥಮ , ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಿ ಪುರಸ್ಕರಿಸಲಾಯಿತು.

ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿಗಳು 2023 ಜನವರಿ ತಿಂಗಳಿನಲ್ಲಿ ಮಂಗಳೂರಿನ ಟೌನ್ ಹಾಲ್ ನಲ್ಲಿ  ನಡೆಯಲಿರುವ  ಜಿಲ್ಲಾ ಮಟ್ಟದ "Talent Hunt" ನಲ್ಲಿ ಸ್ಪರ್ಧಿಸಲು ಆಯ್ಕೆಗೊಂಡಿದ್ದಾರೆ. 

ವಿವರಗಳು ಈ ಕೆಳಗಿನಂತಿದೆ. 

ಡ್ರಾಯಿಂಗ್ - ತನೀಶಾ ಫಾತಿಮಾ (ಬ್ಯಾರೀಸ್ ಆಂಗ್ಲ ಮಾಧ್ಯಮ ಶಾಲೆ ಲೇಡಿಹಿಲ್)

ಕ್ವಿಝ್ - ತೊಷಿತ್ & ಸಾರಾ ನಿಮ್ರಿಶ (ಚೈತನ್ಯ ಆಂಗ್ಲ ಮಾಧ್ಯಮ ಶಾಲೆ ಕೃಷ್ಣಾಪುರ )

ಪಿಕ್ & ಸ್ಪೀಕ್ - ನಿಧ ಖದೀಜಾ ನೂರ್  ( ಹಿರ  ಆಂಗ್ಲ ಮಾಧ್ಯಮ ಶಾಲೆ ಬಬ್ಬುಕಟ್ಟೆ, ತೊಕೊಟ್ಟು )

ಸೈನ್ಸ್ ಮಾಡೆಲ್ - ಮಹಿಷ & ನಫೀಸತುಲ್ ಮಿಸ್ರಿಯಾ  (ಆದರ್ಶ್ ಆಂಗ್ಲ ಮಾಧ್ಯಮ ಶಾಲೆ ತೋಡಾರ್ ) -ಪ್ರಥಮ 

ಮೊಹಮ್ಮದ್ ಅಸ್ನಾನ್ & ಮೊಹಮ್ಮದ್ ಅಲ್ಝನ್ ಹುಸೈನ್   ( ತುಂಬೆ  ಆಂಗ್ಲ ಮಾಧ್ಯಮ ಶಾಲೆ ತುಂಬೆ  )-ದ್ವಿತೀಯ

ಕಾರ್ಯಕ್ರಮದ ತೀರ್ಪುಗಾರರಾಗಿ  ಹೈದರ್ ಮರ್ದಾಲ (ಪ್ರಾಂಶುಪಾಲರು -ಮನ್ಶರ್ ಪಾರ ಮೆಡಿಕಲ್ ಕಾಲೇಜು ಬೆಳ್ತಂಗಡಿ) , ಪ್ರವೀಣ್, ಸಚಿತ ಮತ್ತು ಸ್ವಾತಿ (ನೋಬಲ್ ಆಂಗ್ಲ ಮಾಧ್ಯಮ ಶಾಲೆ ಕುಂಜತ್ಬೈಲ್ ) ಸಹಕರಿಸಿದರು. 

ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಯೆನೆಪೋಯ ವಿದ್ಯಾ ಸಂಸ್ಥೆ ಜೆಪ್ಪಿನಮೊಗರು ವಹಿಸಿತ್ತು.

Similar News