ಮಸ್ಕತ್: ಬ್ಯಾಡ್ಮಿಂಟನ್ ಆಡುವಾಗಲೇ ಕುಸಿದು ಬಿದ್ದು ಭಾರತ ಮೂಲದ ವ್ಯಕ್ತಿ ನಿಧನ
ಮಸ್ಕತ್ (ಒಮನ್): ಬ್ಯಾಡ್ಮಿಂಟನ್ (badminton) ಪಂದ್ಯವೊಂದರಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ದಿಢೀರನೆ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಮಸ್ಕತ್‌ನ (Muscat) ನಡೆದಿದೆ ಎಂದು freepressjournal.in ವರದಿ ಮಾಡಿದೆ.
ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಬ್ಯಾಡ್ಮಿಂಟನ್ ಪಂದ್ಯವಾಡುತ್ತಿದ್ದ ವ್ಯಕ್ತಿಯೊಬ್ಬ ದಿಢೀರನೆ ಕುಸಿದು ಬಿದ್ದಿರುವುದು ಅದರಲ್ಲಿ ಸೆರೆಯಾಗಿದೆ. ನರೇಂದ್ರ ನಾಥ್ ಮಿಶ್ರಾ ಎಂಬ ಪತ್ರಕರ್ತರೊಬ್ಬರು ಈ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಅವರು ಅಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಭಾರತೀಯ ಮೂಲದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಈ ವಿಡಿಯೊವನ್ನು "ದಿಢೀರ್ ಸಾವಿನ ಪ್ರವೃತ್ತಿ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಭಾರತೀಯ ಮೂಲದ ವ್ಯಕ್ತಿಯೊಬ್ಬರು ಆಡುವಾಗಲೇ ಮಸ್ಕತ್‌ನ ಬ್ಯಾಡ್ಮಿಂಟನ್ ಅಂಗಳದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಆ ವಿಡಿಯೊದಲ್ಲಿ ಕ್ರೀಡಾ ದಿರಿಸು ಧರಿಸಿರುವ ವ್ಯಕ್ತಿಯೊಬ್ಬರು ಉತ್ಸಾಹದಿಂದ ಆಡುತ್ತಿದ್ದ ಅವರು ಕೆಲವೇ ಸೆಕೆಂಡುಗಳಲ್ಲಿ ಹೃದಯಾಘಾತದಿಂದ ಕುಸಿದು ಬೀಳುವುದು ಸೆರೆಯಾಗಿದೆ.
ಕೋವಿಡ್-19 ಸಾಂಕ್ರಾಮಿಕದ ನಂತರ ದಿಢೀರ್ ಹೃದಯಾಘಾತಗಳು ಆಘಾತಕಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಈ ಪ್ರವೃತ್ತಿಯು ಹೃದಯ ತಜ್ಞರ ಕಳವಳಕ್ಕೆ ಕಾರಣವಾಗಿದೆ.
अचानक मौत का ट्रेंड सिर्फ़ भारत में ही नहीं है।
— Narendra nath mishra (@iamnarendranath) January 9, 2023
मस्कट में एक भारतीय मूल के व्यक्ति की कोर्ट में खेलते हुए हार्ट अटैक से मौत pic.twitter.com/m2FWaqM8bi