ಕುಂದಾಪುರ: ಮಗುವಿನ ಸಾವಿನಿಂದ ಮನನೊಂದು ತಂದೆ ಆತ್ಮಹತ್ಯೆ
Update: 2023-01-16 16:32 GMT
ಕುಂದಾಪುರ: ತನ್ನ ಮಗುವಿನ ಸಾವಿನ ಚಿಂತೆಯಲ್ಲಿ ಮನನೊಂದ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.15ರಂದು ಅಪರಾಹ್ನ ಹೆಸ್ಕತ್ತೂರು ಗ್ರಾಮದ ಚಟ್ಟಾರಿಕಲ್ ಎಂಬಲ್ಲಿ ನಡೆದಿದೆ.
ಮೃತರನ್ನು ಸ್ಥಳೀಯ ನಿವಾಸಿ ರವೀಂದ್ರ ಕುಲಾಲ್(33) ಎಂದು ಗುರುತಿಸ ಲಾಗಿದೆ. ಇವರ ಮಗು ಹುಟ್ಟಿದ ಒಂದೂವರೆ ತಿಂಗಳಲ್ಲಿ ಅನಾರೋಗ್ಯದಿಂದ ಮೃತಪಟ್ಟಿತ್ತು. ಇದೇ ಚಿಂತೆಯಲ್ಲಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.