ಉಮ್ರಾ ಮುಗಿಸಿ ಹಿಂದಿರುಗುವ ವೇಳೆ ಕನ್ಯಾನದ ಮಹಿಳೆ ಮಸ್ಕತ್ ನಲ್ಲಿ ನಿಧನ: ಮೃತದೇಹ ಊರಿಗೆ ತಲುಪಿಸಲು ನೆರವಾದ KCF

Update: 2023-01-29 06:38 GMT

ಮಸ್ಕತ್: ಪವಿತ್ರ ಉಮ್ರಾ ಯಾತ್ರೆ ಮುಗಿಸಿ ಊರಿಗೆ ಹಿಂದಿರುಗುವ ವೇಳೆ ಬಂಟ್ವಾಳ ತಾಲೂಕಿನ ಕನ್ಯಾನ ಸಂಕದ ಬಳಿ ನಿವಾಸಿ ಹನೀಫ್ ಎಂಬವರ ತಾಯಿ ನಬೀಸ ಅನಾರೋಗ್ಯದಿಂದ ಗುರುವಾರ ಮಸ್ಕತ್ ನಲ್ಲಿ ನಿಧನರಾಗಿದ್ದಾರೆ. ಅವರ ಮೃತದೇಹ ಊರಿಗೆ ತಲುಪಿಸುವಲ್ಲಿ ಕೆಸಿಎಫ್ ಒಮಾನ್ ನೆರವಾಗಿದೆ ಎಂದು ಪ್ರಕಟನೆ ತಿಳಿಸಿದೆ.

ನಬೀಸ ಉಮ್ರಾ ಮುಗಿಸಿ ಮದೀನದಿಂದ ಊರಿಗೆ ಹಿಂದಿರುಗಲು ಮುಂಬೈ ವಿಮಾನವನ್ನೇರಿದ್ದರು. ಆದರೆ ಅವರಿಗೆ ತೀವ್ರ ಅನಾರೋಗ್ಯ ಕಾಣಿಸಿಕೊಂಡ ಕಾರಣ ವಿಮಾನವನ್ನು ಮಸ್ಕತ್ ನಲ್ಲಿ ತುರ್ತಾಗಿ ಲ್ಯಾಂಡ್ ಮಾಡಲಾಯಿತು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು.

ಬಳಿಕ ಆಸ್ಪತ್ರೆಯಲ್ಲಿ ಅಗತ್ಯ ಕಾರ್ಯಗಳ ನೇತೃತ್ವವನ್ನು KCF ಒಮಾನ್ ಇದರ ಸಾಂತ್ವನ ವಿಭಾಗವು ವಹಿಸಿತ್ತು. ಮೃತದೇಹವನ್ನು ಊರಿಗೆ ಕಳಿಹಿಸಲು ಅಗತ್ಯವಾದ ಎಲ್ಲ ದಾಖಲೆಗಳನ್ನು ಸರಿಮಾಡಿಸಿ ಮೃತದೇಹವನ್ನು ಊರಿಗೆ ಕಳುಹಿಸಲಾಯಿತು KCF ಒಮಾನ್ ಘಟಕದ ಪ್ರಕಟನೆ ತಿಳಿಸಿದೆ.

Similar News