ಜಿದ್ದಾ: ಫೆ.10ರಂದು ಮಲೆನಾಡು ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ನಿಂದ 'ಮಲೆನಾಡ ಸಂಗಮ' ಕಾರ್ಯಕ್ರಮ
Update: 2023-02-05 06:41 GMT
ಜಿದ್ದಾ, ಫೆ.5: ಮಲೆನಾಡು ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಂಜಿಟಿ ಪಶ್ಚಿಮ ವಲಯದ 'ಮಲೆನಾಡ ಸಂಗಮ' ಕಾರ್ಯಕ್ರಮವು ಫೆ.10ರಂದು ಮತ್ತು ಪವಿತ್ರ ಮಕ್ಕಾ ಹೆದ್ದಾರಿಯ ಬಳಿಯಿರುವ ಅಲ್ ಶಿಫಾ ಪ್ರಾಂತ್ಯದ ಕ್ವೀನ್ ನೈಟ್ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ.
ಅಂದು ಸಂಜೆ 5ರಿಂದ ರಾತ್ರಿ 2ರವರೆಗೆ ನಡೆಯುವ 'ಮಲೆನಾಡ ಸಂಗಮ'ದಲ್ಲಿ ಕಿರಾಅತ್ ಸ್ಪರ್ಧೆ, ಕ್ವಿಝ್ ಹಾಗೆಯೇ ಆಟೋಟ ಸ್ಪರ್ಧೆಗಳಾದ ಕ್ರಿಕೆಟ್, ವಾಲಿಬಾಲ್, ಹಗ್ಗಜಗ್ಗಾಟ, ಮ್ಯೂಸಿಕ ಚೆಯರ್, ಮಡಿಕೆ ಹೊಡೆಯುವಂತಹ ಮನೋರಂಜನಾ ಸ್ಪರ್ಧೆಗಳಿರಲಿದೆ. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಎಂಜಿಟಿ ಪಶ್ಚಿಮ ವಲಯ ಅಧ್ಯಕ್ಷ ಮುಷ್ತಾಕ್ ಗಬ್ಗಲ್, ಕಾರ್ಯದರ್ಶಿ ಇಕ್ಬಾಲ್ ಗಬ್ಗಲ್, ಸಮಾರಂಭದ ವ್ಯವಸ್ಥಾಪಕ ರಿಯಾಝ್ ಗಬ್ಗಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.