ತಲೆಮರೆಸಿಕೊಂಡಿದ್ದ ಬ್ರಿಟನ್ ನ ಕುಖ್ಯಾತ ಕ್ರಿಮಿನಲ್ ಥೈಲ್ಯಾಂಡ್ನಲ್ಲಿ ಬಂಧನ

Update: 2023-02-12 18:52 GMT

ಬ್ಯಾಂಕಾಕ್, ಫೆ.12: ಕಳೆದ 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ  ಬ್ರಿಟನ್ನ ಕುಖ್ಯಾತ ಕ್ರಿಮಿನಲ್, ಮಾದಕ ವಸ್ತುಗಳ ಮಾರಾಟ ದಂಧೆಯ ಕಿಂಗ್ಪಿನ್ ರಿಚರ್ಡ್ ವ್ಯಾಕೆಲಿಂಗ್ನನ್ನು ಥೈಲ್ಯಾಂಡ್ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ರವಿವಾರ ಮಾಹಿತಿ ನೀಡಿದ್ದಾರೆ.

2016ರಲ್ಲಿ 9.6 ದಶಲಕ್ಷ ಡಾಲರ್ ಮೌಲ್ಯದ ಮಾದಕವಸ್ತುವನ್ನು ಈತ ಬ್ರಿಟನ್ಗೆ ಅಕ್ರಮವಾಗಿ ಸಾಗಾಟ ಮಾಡಿರುವುದನ್ನು  ಬ್ರಿಟನ್ ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದರು.

ಬ್ರಿಟನ್ ಪೊಲೀಸರು ರಿಚರ್ಡ್ಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿದಾಗ ಈತ 2018ರಲ್ಲಿ ಬ್ರಿಟನ್ನಿಂದ ಪರಾರಿಯಾಗಿ ಥೈಲ್ಯಾಂಡ್ನ ಸಮುದ್ರ ಬದಿಯ ರೆಸಾರ್ಟ್ ನಗರ ಹುವಾ ಹಿನ್ನಲ್ಲಿ ಹೆಸರು ಬದಲಿಸಿ ವಾಸಿಸುತ್ತಿದ್ದ. ತನ್ನ ಪಾಸ್ಪೋರ್ಟ್ನಲ್ಲಿ ಐರ್ಯ್ಲಾಂಡ್ ಪ್ರಜೆ ಎಂದು ನಮೂದಿಸಿ ಈತ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ. ಸಂಶಯದ ಮೇರೆಗೆ ಈತನನ್ನು ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Similar News