ದುಬೈ: ಸಾಹೇಬಾನ್ ನಿಂದ ಉದ್ಯಮಿಗಳು ಹಾಗೂ ವೃತ್ತಿಪರರ ಸಭೆ

Update: 2023-02-13 14:28 GMT

ದುಬೈ: ಸಾಹೇಬಾನ್ ಬ್ಯುಸಿನೆಸ್ & ಪ್ರೊಫೆಶನಲ್ಸ್ ಗ್ರೂಪ್ (SBPG) ಮತ್ತು ಸಾಹೇಬಾನ್ ಯುಎಇ ವತಿಯಿಂದ ಉದ್ಯಮಿಗಳು ಮತ್ತು ವೃತ್ತಿಪರರ ಸಭೆ(Business and Professionals Meet)ಯು ಇತ್ತೀಚೆಗೆ ದುಬೈನ ಶೇಖ್ ಝಾಯೆದ್ ರಸ್ತೆಯಲ್ಲಿರುವ ಕ್ರೌನ್ ಪ್ಲಾಝಾ ಹೋಟೆಲ್ ನ ಅಲ್ ಜುಮೈರಾ ಬಾಲ್ ರೂಮ್ ನಲ್ಲಿ ನಡೆಯಿತು.

ಸಾಹೇಬಾನ್ ಬ್ಯುಸಿನೆಸ್ ಕಮ್ಯುನಿಟಿ ಯುಎಇ ಪ್ರಾಯೋಜಿಸಿದ್ದ ಈ ಯಶಸ್ವಿ ಕಾರ್ಯಕ್ರಮದಲ್ಲಿ ಯುಎಇ, ಜಿಸಿಸಿ ಮತ್ತು ಭಾರತದಿಂದ ಸಾಹೇಬಾನ್ ಸಮುದಾಯದ ಪ್ರತಿನಿಧಿಗಳು ಭಾಗವಹಿಸಿದ್ದರು.

ಕಿರಾಅತ್ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. SBPG ಸಂಚಾಲಕ ಅಲ್ತಾಫ್ ಎಂ.ಎಸ್ ಸ್ವಾಗತಿಸಿ, ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಬಳಿಕ ನಡೆದ  ಪ್ಯಾನಲ್ ಚರ್ಚೆಯಲ್ಲಿ  ಅಬುಧಾಬಿ ಖಲೀಫಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಅಬ್ದುಲ್ ರಹಿಮಾನ್ ಬೇಗ್, ಉದ್ಯಮಿ ಮಹಿಳೆ, ಭಾರತೀಯ ಮಹಿಳಾ ಸಂಘದ ಗೌರವಾಧ್ಯಕ್ಷೆ ಅಂಬ್ರೀನ್ ಶೇಕ್, ಉದ್ಯಮಿ ಮುಮ್ತಾಝ್ ಹುಸೇನ್; ರಾಯಲ್ ಕಾಲೇಜ್ ಆಫ್ ಸೈಕಿಯಾಟ್ರಿಸ್ಟ್ಸ್ (UK) ನ ಫೆಲೋ ಮತ್ತು ಸಲಹೆಗಾರ ಡಾ. ವಲೀದ್ ಅಹ್ಮದ್ ಮತ್ತು ಮಾಜಿ ಬ್ಯಾಂಕರ್ ಹಾಗೂ ರಿಸ್ಕ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಸೈಯದ್ ಸಿರಾಜ್ ಅಹ್ಮದ್ ಭಾಗವಹಿಸಿ ಮಾತನಾಡಿದರು. 
ಇಪಿಸಿ ಆಯಿಲ್ ಮತ್ತು ಗ್ಯಾಸ್ ಕ್ಷೇತ್ರದ ವೃತ್ತಿಪರ  ಅಲ್ತಾಫ್ ಎಂ.ಎಸ್. ಚರ್ಚೆಯನ್ನು ನಡೆಸಿಕೊಟ್ಟರು.   

ದುಬೈನ ಹಿದಾಯತ್ ಗ್ರೂಪ್ ಸಿಇಒ ಇಮ್ರಾನ್ ಹಿದಾಯತ್ ಮಾತನಾಡಿ, ತಮ್ಮ ಉದ್ಯಮ ಕ್ಷೇತ್ರದ ಯಶಸ್ಸಿನ ಪ್ರಯಾಣದ ಬಗ್ಗೆ ವಿವರಿಸಿದರು.

ಚಾರ್ಟರ್ಡ್ ಅಕೌಂಟೆಂಟ್ ಸುಹೈಲ್ ಕುದ್ರೋಳಿ, ಯುಎಇ ಸಾಹೇಬನ್ ಸಂಚಾಲಕ ಎಚ್. ಎಂ. ಅಫ್ರೋಝ್ ಅಸ್ಸಾದಿ ಮತ್ತು ಸಿರಾಜ್ ಅಹ್ಮದ್ ಮಾತನಾಡಿ ಶುಭ ಹಾರೈಸಿದರು. 

ಬಳಿಕ ಮುಹಮ್ಮದ್ ಸಲ್ಮಾನ್ ತಮ್ಮ ಸ್ಟಾರ್ಟಪ್ ಬ್ಯುಸಿನೆಸ್ 'ದಿ ಸ್ಟೆಪ್ಅಪ್ ವೆಂಚರ್ಸ್'  ಕುರಿತು ಮಾತನಾಡಿದರು. ಸಾಹೇಬಾನ್ ಮಹಿಳಾ ಸದಸ್ಯೆಯರಾದ ಸಹಾರಾ ಆಸಿಫ್ ಅವರು 'ಲೈಫ್ ಸ್ಕಿಲ್ಸ್ ಎಜುಕೇಶನ್' ಮತ್ತು ವಸೀಮ್ ಶೇಖ್ ಹಾಗೂ ತಂಝಿಯಾ ಖಾನ್ 'ಟ್ರೂ ಚೋಕೋ & ನಟ್ಸ್' ಕುರಿತು ಮಾತನಾಡಿದರು.

ಅಲ್ತಾಫ್ ಎಂ.ಎಸ್, ಮುಹಮ್ಮದ್ ಸಮೀವುಲ್ಲಾ, ಮುಹಮ್ಮದ್ ಸುಫ್ಯಾನ್ ಹಾಗೂ ಫೈಝಾನ್ ಖತೀಬ್ ಕಾರ್ಯಕ್ರಮ ನಿರ್ವಹಿಸಿದರು. ಮುಹಮ್ಮದ್ ಸುಫ್ಯಾನ್ ನಿರೂಪಿಸಿದರು.

Similar News