​ಗಾಝಾದ ಮೇಲೆ ಇಸ್ರೇಲ್ ವಾಯುದಾಳಿ‌

Update: 2023-02-13 18:22 GMT

ಗಾಝಾ ಸಿಟಿ, ಫೆ.13: ಕಳೆದ ವಾರಾಂತ್ಯ ಫೆಲಸ್ತೀನಿಯನ್ ಪ್ರದೇಶದಿಂದ ಇಸ್ರೇಲ್ನತ್ತ ರಾಕೆಟ್ ಪ್ರಯೋಗಿಸಿದ್ದಕ್ಕೆ ಪ್ರತಿಯಾಗಿ ಇಸ್ರೇಲ್ ಗಾಝಾದ ಮೇಲೆ ಸೋಮವಾರ ವಾಯುದಾಳಿ ನಡೆಸಿರುವುದಾಗಿ ವರದಿಯಾಗಿದೆ

ಹಮಾಸ್ ಭಯೋತ್ಪಾದಕ ಸಂಘಟನೆ ರಾಕೆಟ್ ಉತ್ಪಾದನೆಗಾಗಿ ಕಚ್ಛಾವಸ್ತುಗಳನ್ನು ದಾಸ್ತಾನಿಡಲು ಬಳಸುತ್ತಿದ್ದ ಭೂಗತ ಸಂಕೀರ್ಣವನ್ನು ಗುರಿಯಾಗಿಸಿ ವಾಯುದಾಳಿ ನಡೆಸಲಾಗಿದೆ . ಶನಿವಾರ ಗಾಝಾದಿಂದ ಇಸ್ರೇಲ್ ಕಡೆ ರಾಕೆಟ್ ಪ್ರಯೋಗಿಸಿದ್ದಕ್ಕೆ ಪ್ರತಿಯಾಗಿ ವಾಯುದಾಳಿ ನಡೆದಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಸೋಮವಾರ ಬೆಳಗ್ಗೆ ಇಸ್ರೇಲ್ ಸೇನೆ ಪಶ್ಚಿಮದಂಡೆಯ ನಬ್ಲೂಸ್ ನಗರದ ಮೇಲೆ ನಡೆಸಿದ ವಾಯುದಾಳಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಫೆಲಸ್ತೀನ್ ರೆಡ್ಕ್ರೆಸೆಂಟ್ ಹೇಳಿದೆ. ಇಸ್ರೇಲ್ ವಾಯುದಾಳಿಯ ಬೆನ್ನಲ್ಲೇ ಗಾಝಾದ ಗಡಿಭಾಗದಲ್ಲಿ ವಾಯುದಾಳಿಯ ಸೈರನ್ ಮೊಳಗಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Similar News