ಪಂಚವರ್ಣ ರಜತಗೌರವಕ್ಕೆ ವಿನಯಚಂದ್ರ ಸಾಸ್ತಾನ ಆಯ್ಕೆ
Update: 2023-02-17 13:57 GMT
ಕೋಟ : ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲಯ ಬೆಳ್ಳಿಹಬ್ಬದ ವರ್ಷಾಚರಣೆಯ ಅಂಗ ವಾಗಿ ಸಾಧಕರಿಗೆ ನೀಡುವ ರಜತ ಗೌರವಾರ್ಪಣೆಗೆ ಈ ಬಾರಿ ಕಾರ್ಕಳದ ರಂಗನಪಲ್ಕೆ ಯಲ್ಲಿರುವ ಹೊಸಬೆಳಕು ಅನಾಥಾಶ್ರಮದ ಸೇವಾ ಪ್ರತಿನಿಧಿ ಹ.ರಾ ವಿನಯಚಂದ್ರ ಸಾಸ್ತಾನ ಆಯ್ಕೆ ಯಾಗಿದ್ದಾರೆ.
ಸಾಸ್ತಾನ ಮಿತ್ರರು ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮ ಹಾಗೂ ಪರಿಸರ ಸ್ನೇಹಿಯಾಗಿ ಗುರುತಿಸಿಕೊಂಡ ವಿನಯಚಂದ್ರ, ಪರಿಸರ ಸಂಪನ್ಮೂಲ ವ್ಯಕ್ಯಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫೆ.೨೫ರಂದು ಬಾಳೆಕುದ್ರು ಮಠದ ಶ್ರೀನೃಸಿಂಹಾಶ್ರಮ ಸ್ವಾಮೀಜಿಗಳ ಸಮ್ಮುಖದಲ್ಲಿ ಈ ಗೌರವ ಕಾರ್ಯಕ್ರಮ ನಡೆಯಲಿದೆ ಎಂದು ಪಂಚವರ್ಣ ಸಂಸ್ಥೆಯ ಅಧ್ಯಕ್ಷ ಅಜಿತ್ ಆಚಾರ್ಯ ತಿಳಿಸಿದ್ದಾರೆ.