ಉಡುಪಿ ಜಿಲ್ಲಾಸ್ಪತ್ರೆಯ ಒಳರೋಗಿ ನಾಪತ್ತೆ

Update: 2023-02-24 13:53 GMT

ಉಡುಪಿ: ಜಾಂಡಿಸ್ ಖಾಯಿಲೆ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಒಳರೋಗಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ನಾಪತ್ತೆಯಾದವರನ್ನು ಬೆಳ್ಳಂಪಳ್ಳಿ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿಯ ನಿವಾಸಿ ಜಯರಾಮ್ ಕಾಮತ್(46) ಎಂದು ಗುರುತಿಸಲಾಗಿದೆ.

ಜಾಂಡಿಸ್ ಖಾಯಿಲೆಯಿಂದ ಬಳಲುತ್ತಿದ್ದ ಇವರು ಫೆ.16ರಂದು ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಹಗಲು ಹೊತ್ತಿನಲ್ಲಿ  ಅಣ್ಣ ಇವರ ಆರೈಕೆಯಲ್ಲಿದ್ದರು. ಫೆ.21ರಂದು ಅಪರಾಹ್ನ ಅಣ್ಣ ಮನೆಗೆ ಹೋಗಿದ್ದು, ಮರುದಿನ ಆಸ್ಪತ್ರೆಗೆ ಬಂದು ನೋಡಿದಾಗ ಜಯರಾಮ್ ಕಾಮತ್ ನಾಪತ್ತೆಯಾಗಿರುವುದು ಕಂಡುಬಂದಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News