ದುಬೈ: 10ನೇ ವಾರ್ಷಿಕೋತ್ಸವ ಆಚರಿಸಿಕೊಂಡ ಅಮೆರಿಕನ್ ಸ್ಪೆಷಾಲಿಟಿ ಫುಡ್ಸ್ ಸಂಸ್ಥೆ
650ಕ್ಕೂ ಹೆಚ್ಚು ಉತ್ಪನ್ನಗಳ ಕ್ಯಾಟಲಾಗ್ ಅನಾವರಣ
ದುಬೈ: ಫೆಬ್ರವರಿ 19ರಂದು ಅಮೆರಿಕನ್ ಸ್ಪೆಷಾಲಿಟಿ ಫುಡ್ಸ್ ಕಂಪನಿಯು ದುಬೈನಲ್ಲಿ ತನ್ನ 10ನೇ ವಾರ್ಷಿಕೋತ್ಸವವನ್ನು ಆಚರಿಸಿತು. ಈ ಸಂದರ್ಭದಲ್ಲಿ ದುಬೈನ ಅಮೆರಿಕಾ ಪ್ರಧಾನ ರಾಯಭಾರ ಕಚೇರಿಯ ಪ್ರಾಂತೀಯ ಕೃಷಿ ಸಮಾಲೋಚಕ ವ್ಯಾಲೆರಿ ಬ್ರೌನ್ ಗಣ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಅಮೆರಿಕಾದ ಸ್ವಾದವಿರುವ ಉತ್ಪನ್ನಗಳನ್ನು 20 ವೈವಿಧ್ಯದೊಂದಿಗೆ 50 ದೇಶಗಳಿಗೆ ಪೂರೈಸುವ ಅಮೆರಿಕನ್ ಸ್ಪೆಷಾಲಿಟಿ ಫುಡ್ಸ್ ಕಂಪನಿಯು ಈ ಸಂದರ್ಭದಲ್ಲಿ 650ಕ್ಕೂ ಹೆಚ್ಚು ಉತ್ಪನ್ನಗಳ ನೂತನ ಕ್ಯಾಟಲಾಗ್ ಅನ್ನು ಅನಾವರಣಗೊಳಿಸಿತು. ಈ ಕ್ಯಾಟಲಾಗ್ ಅನ್ನು ಮಂಗಳೂರು ಮೂಲದ ಪ್ರಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಹಾಗೂ ಅಮೆರಿಕನ್ ಸ್ಪೆಷಾಲಿಟಿ ಫುಡ್ಸ್ ಕಂಪನಿಯ ಜಾಗತಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹನಿ ಎಂ. ಹನೀಫ್ ಅನಾವರಣಗೊಳಿಸಿದರು.
(ಅಮೆರಿಕನ್ ಸ್ಪೆಷಾಲಿಟಿ ಫುಡ್ಸ್ ಕಂಪನಿಯ ಜಾಗತಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹನಿ ಎಂ. ಹನೀಫ್)
ಈ ಸಂದರ್ಭದಲ್ಲಿ ಮಾತನಾಡಿದ ಅವರು, "ನಾನು ಈ ಕಂಪನಿಯನ್ನು ಸ್ಥಾಪಿಸಿದಾಗ, ಅದು ನನ್ನ ಆಸೆಯನ್ನು ಪೂರೈಸಿಕೊಳ್ಳುವ ಗುರಿ ಹೊಂದಿದ್ದ ಒಂದು ಕನಸಾಗಿತ್ತು. ಕಷ್ಟಗಳ ಹೊರತಾಗಿಯೂ ನಾವು ಮುಂದುವರಿದೆವು ಮತ್ತು ಅದು ಸವಾಲುಗಳಿಂದ ತುಂಬಿದ್ದ ಹಾದಿಯಾಗಿತ್ತು. ಆದರೆ, ಪ್ರತಿಯೊಬ್ಬರ ಬೆಂಬಲದಿಂದಾಗಿ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಾಧಿಸಲು ಸಾಧ್ಯವಾಯಿತು" ಎಂದು ಹೇಳಿದ್ದಾರೆ.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ವ್ಯಾಲೆರಿ ಬ್ರೌನ್, "ಕಂಪನಿ ಏನೆಲ್ಲಾ ಪಡೆದುಕೊಂಡಿದೆಯೋ, ಅದೆಲ್ಲವೂ ಈ ಸಂಸ್ಥೆಯ ವಿಶೇಷ ಸಾಧನೆಯಾಗಿದೆ" ಎಂದು ಶ್ಲಾಘಿಸಿದರು. "ಅವರು ಬುದ್ಧಿವಂತರು, ಉದ್ಯಮಶೀಲತೆಯಿರುವ ಮತ್ತು ಸದಾಲೋಚನೆ ಉಳ್ಳವರು ಆಗಿದ್ದುದರಿಂದ ಇದೆಲ್ಲವೂ ಸಾಧ್ಯವಾಗಿದೆ. ಅವರ ಸಂಭ್ರಮದಲ್ಲಿ ಭಾಗಿಯಾಗಲು ನಾನು ಸಂತುಷ್ಟನಾಗಿದ್ದೇನೆ" ಎಂದೂ ಹೇಳಿದ್ದಾರೆ.
ಮತ್ತೋರ್ವ ಅತಿಥಿ ಮೊರೊಸ್ಲಾವ್ ಹೊಸೆಕ್ ಹನಿ ಅವರೊಂದಿಗಿನ ವ್ಯವಹಾರಿಕ ಕೌಶಲವನ್ನು ಅಭಿನಂದಿಸಿದರು.
"ನನಗೆ ಕಳೆದ ಐದು ವರ್ಷಗಳಿಂದ ಹನಿಯವರ ಪರಿಚಯವಿದೆ. ಆದರೆ ಹತ್ತು ವರ್ಷಕ್ಕೂ ಹೆಚ್ಚಿನ ಕಾಲದಿಂದ ಆತ್ಮೀಯವಾಗಿರುವಂತೆ ಭಾಸವಾಗುತ್ತಿದೆ. ಇದೊಂದು ಗಾಢವಾದ ವೈಯಕ್ತಿಕ ಮತ್ತು ವ್ಯವಹಾರಿಕ ಸಂಬಂಧ" ಎಂದು ಅವರು ಹೇಳಿದರು.
ಈಗ ಸಾಸ್, ಡ್ರೆಸ್ಸಿಂಗ್ಸ್, ಮಯೋನೆಸ್, ತೋರ್ತಿಲ್ಲಾ ಚಿಪ್ಸ್, ಸಲ್ಸಾ, ಬಟಾಟೆ ಚಿಪ್ಸ್, ಪಾಪ್ ಕಾರ್ನ್, ಸಿರಪ್ ಗಳು, ಆಲಿವ್ ಗಳು ಸೇರಿದಂತೆ 20 ವೈವಿಧ್ಯಮಯ ಉತ್ಪನ್ನಗಳಿರುವ ಈ ಕಂಪನಿಯ ಹತ್ತು ವರ್ಷಗಳ ಹಿಂದೆ ಅಮೆರಿಕಾದ ಮೇರಿಲ್ಯಾಂಡ್ ನಲ್ಲಿ ಕಾರ್ಪೊರೇಟ್ ಕಚೇರಿ ಮತ್ತು ನ್ಯೂಯಾರ್ಕ್ ನಲ್ಲಿ ಮಾರ್ಕೆಟಿಂಗ್ ಕಚೇರಿ ಪ್ರಾರಂಭಿಸಿತ್ತು.
ಅಮೆರಿಕನ್ ಸ್ಪೆಷಾಲಿಟಿ ಸದ್ಯ ದುಬೈ, ಲಂಡನ್, ಮೆಕ್ಸಿಕೊದಲ್ಲಿ ತನ್ನ ಜಾಗತಿಕ ಹೆಜ್ಜೆಗಳನ್ನು ವಿಸ್ತರಿಸಿಕೊಂಡಿದೆ.
ಕಂಪನಿಯು ಬಿ2ಸಿ ವಲಯವನ್ನು ಪ್ರವೇಶಿಸುತ್ತಿದ್ದು, ಎಲ್ಲರಿಗೂ ಅಮೆರಿಕಾ ಸ್ವಾದವನ್ನು ತಲುಪಿಸಲು ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ" ಎಂದು ಅಮೆರಿಕನ್ ಸ್ಪೆಷಾಲಿಟಿ ಫುಡ್ಸ್ ಕಂಪನಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.