ಹೆಬ್ರಿ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಆಯ್ಕೆ

Update: 2023-03-16 08:43 GMT

ಕಾರ್ಕಳ,ಮಾ.16: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನ ಸಂಸ್ಥೆಯಾದ ಹೆಬ್ರಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಹೆಬ್ರಿಯ ಚೈತನ್ಯ ಸಭಾಗ್ರಹದಲ್ಲಿ ನಡೆಯಿತು.

ಅಧ್ಯಕ್ಷರಾಗಿ ಹಿರಿಯ ಪತ್ರಕರ್ತರಾದ ಪ್ರಜಾವಾಣಿ ಪತ್ರಿಕೆಯ ಹೆಬ್ರಿ ತಾಲೂಕು ವರದಿಗಾರ ಸುಕುಮಾರ್ ಮುನಿಯಾಲ್, ಉಪಾಧ್ಯಕ್ಷರಾಗಿ ಉದಯ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀದತ್ತ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ಸುಮಲತಾ ಹೆಬ್ಬಾರ್, ಕೋಶಾಧಿಕಾರಿಯಾಗಿ ಪ್ರಮೋದ್ ಚಂದ್ರ ಪೈ ಅವಿರೋಧ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ನರೇಂದ್ರ ಎಸ್ ಮರಸಣಿಗೆ, ಸಂತೋಷ್ ಶೆಟ್ಟಿ, ಸಂಜೀವ ಆರ್ಡಿ, ರಂಜೀತ್ ಶಿರ್ಲಾಲ್ ಆಯ್ಕೆ ಮಾಡಲಾಯಿತು.

ನಾಡಿನ ವಿವಿಧ ಪತ್ರಿಕೆಗಳಲ್ಲಿ ಸೇವೆಯನ್ನು ಸಲ್ಲಿಸಿರುವ ಸುಕುಮಾರ್ ಮುನಿಯಾಲ್ ರಾಜ್ಯದ ವಿವಿಧ ಸಮಾಜಸೇವಾ ಸಂಘದಲ್ಲಿ ಸಕ್ರೀಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಉಡುಪಿ ಜಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಉಡುಪಿ ಸೂಚನೆ ಮೇರೆಗೆ ರಜತ ಮಹೋತ್ಸವ ಸಮಿತಿ ಸಂಚಾಲಕ ಮೊಹಮ್ಮದ್ ಶರೀಫ್ ಕಾರ್ಕಳ ರವರ ಮೇಲುಸ್ತುವಾರಿಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. 

Similar News