ದುಬೈ: ಲೊರೆಟ್ಟೊ ಫ್ರೆಂಡ್ಸ್ ಯು.ಎ.ಇ ಆಶ್ರಯದಲ್ಲಿ "ಯುಎಇ ಟ್ರೋಫಿ -2023"

Update: 2023-03-17 07:21 GMT

ದುಬೈ: ಲೊರೆಟ್ಟೊ ಫ್ರೆಂಡ್ಸ್ ಯು.ಎ.ಇ. ಇದರ ಆಶ್ರಯದಲ್ಲಿ ಮೆಗಾ ಲೀಗ್ ಕ್ರಿಕೆಟ್ ಪಂದ್ಯಾಟ  "ಯುಎಇ ಟ್ರೋಫಿ -2023"  ದುಬೈಯ ಓವಲ್ ಕ್ರಿಕೆಟ್ ಸ್ಟೇಡಿಯಂ ಮತ್ತು ಎಂಸಿಸಿ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. 

ದುಬೈಯಲ್ಲಿ ನೆಲೆಸಿರುವ ಮಂಗಳೂರು ಮತ್ತು ಉಡುಪಿ ವಲಯದ ಅಂಡರ್ ಆರ್ಮ್ ಕ್ರಿಕೆಟ್ ಪ್ರೇಮಿಗಳನ್ನು ಒಗ್ಗೂಡಿಸುವ ಸಲುವಾಗಿ ಆಯೋಜಿಸಲಾದ ಈ ಪಂದ್ಯಾವಳಿಯಲ್ಲಿ ಸಂಯೋಜಕ  ರೋಶನ್ ನೊರೋನ್ಹಾ, ಕೋಶಾಧಿಕಾರಿ ಅರುಣ್ ಬರ್ಬೋಜಾ, ಕೋರ್ ಕಮಿಟಿ ಸದಸ್ಯರುಗಳಾದ  ರೂಪೇಶ್ ಪಿಂಟೋ, ರಾಯ್ ಡಿಸೋಜಾ, ವಿನೋದ್ ಪಿಂಟೋ, ಸಚಿನ್ ನೊರೋನ್ಹಾ,  ಪ್ರಸನ್ನ ವಿನೋದ್ ಪಿಂಟೋ ದೀಪ ಬೆಳಗಿಸಿ ಉದ್ಘಾಟಿಸಿದರು. 

"ಯುಎಇ ಟ್ರೋಫಿ -2023"  ನನ್ನು ಲೇಟನ್ ಎಬಿ ತಂಡ ತಮ್ಮದಾಗಿಸಿಕೊಂಡರೆ ಕ್ಯಾಥೋಲಿಕ್ ಸನ್ಶೈನ್ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಲೇಟನ್ ಟೀಮ್ ಎಬಿ ತಂಡದ ಟೈಸನ್ ವಿಲ್ಸನ್ ರೆಬೆಲ್ಲೊ ಅತ್ಯುತ್ತಮ ಬ್ಯಾಟ್ಸ್‌ಮನ್ , ಸುದೀಶ್ ಸಲ್ಡಾನ್ಹಾ ಅತ್ಯುತ್ತಮ ಬೌಲರ್, ನೆಷ್ಟನ್ ಶರಣ್ ಪಿಂಟೊ
ಪಂದ್ಯದ ಅಂತಿಮ ಆಟಗಾರ ಹಾಗೂ ಕ್ಯಾಥೋಲಿಕ್ ಸನ್ಶೈನ್ ತಂಡದ ನೆಲ್ಸನ್ ಸಂತೋಷ್ ಫೆರ್ನಾಂಡಿಸ್ ಪಂದ್ಯಾವಳಿಯ ಆಟಗಾರ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದುಬೈಯ ರೆಸಾರ್ಟ್ ಸಪ್ಲೈಸ್ ನ ವ್ಯವಸ್ಥಾಪಕ ನಿರ್ದೇಶಕ ಮನೋಜ್ ವಾಸ್, ಟ್ರುಸಪ್ಲೈ ಜನರಲ್ ಟ್ರೇಡಿಂಗ್ ಮತ್ತು ಲೇಟನ್ ಶಿಪ್ಪಿಂಗ್ ನ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ಜಾನ್ ಲ್ಯಾನ್ಸಿ ಡಿಸೋಜಾ, ಟ್ರಾನ್ಸ್‌ವಿಲ್ ಫೇಡ್ ಆಕ್ಸೆಸ್ ಕ್ರೇಡಲ್ಸ್ ಮತ್ತು ವಿಲ್ಸ್ ರೆಸ್ಟೋರೆಂಟ್ ದುಬೈ ಇದರ ವ್ಯವಸ್ಥಾಪಕ‌ ನಿರ್ದೇಶಕ ವಿಲ್ಫ್ರೆಡ್ ಥಾಮಸ್ ಫೆರ್ನಾಂಡಿಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಡೆಸ್ಮಂಡ್ ನೊರೊನ್ಹಾ,  ಗ್ರೆಟ್ಟಾ ಫೆರ್ನಾಂಡಿಸ್,  ಸೋನಾಲಿ ಪಿಂಟೋ  ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋರ್ ಕಮಿಟಿ‌ ಸದಸ್ಯ ಲಾಯ್ಡ್ ರೋಡ್ರಿಗಸ್ ವಂದಿಸಿದರು. ಡೊನಾಲ್ಡ್ ನೊರೊನ್ಹಾ ಹಾಗೂ ಡೇವಿಡ್ ನೊರೊನ್ಹಾ ಕಾರ್ಯಕ್ರಮ ನಿರೂಪಿಸಿದರು. 

Similar News