ಸೌದಿ ಅರೇಬಿಯಾದಲ್ಲಿ ಗುರುವಾರದಿಂದ ರಮಝಾನ್ ಉಪವಾಸ ಆರಂಭ
Update: 2023-03-21 16:16 GMT
ಜಿದ್ದಾ: ಸೌದಿ ಅರೇಬಿಯಾದ ತಮಿರ್ ವೀಕ್ಷಣಾಲಯದಲ್ಲಿ ಮಂಗಳವಾರ ರಂಝಾನ್ ತಿಂಗಳ ಅರ್ಧಚಂದ್ರಾಕೃತಿ ಕಾಣಿಸದ ಕಾರಣ ಗುರುವಾರ, ಮಾರ್ಚ್ 23 ರಂಝಾನ್ ನ ಮೊದಲ ದಿನವಾಗಿರುತ್ತದೆ ಎಂದು gulfnews ವರದಿ ಮಾಡಿದೆ.
ಈ ನಿರ್ಧಾರವನ್ನು ಸೌದಿ ಅರೇಬಿಯಾದ ಸುಪ್ರೀಂ ಕೋರ್ಟ್ ಇನ್ನೂ ಅಧಿಕೃತವಾಗಿ ದೃಢೀಕರಿಸಬೇಕಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಇಸ್ಲಾಮಿಕ್ ಕ್ಯಾಲೆಂಡರ್ ಸಾಮಾನ್ಯವಾಗಿ 29 ಅಥವಾ 30 ದಿನಗಳಾಗಿರುತ್ತವೆ. ತಿಂಗಳ ಆರಂಭ ಮತ್ತು ಅಂತ್ಯವು ಚಂದ್ರನ ಮೇಲೆ ಅವಲಂಬಿತವಾಗಿರುತ್ತದೆ, ಅದಕ್ಕಾಗಿಯೇ ರಂಝಾನ್ ಅನ್ನು ವಾರ್ಷಿಕವಾಗಿ ಯಾವುದೇ ನಿರ್ದಿಷ್ಟ ದಿನಗಳಲ್ಲಿ ಆಚರಿಸಲಾಗುವುದಿಲ್ಲ.