ಮುಕ್ತ ವಿವಿ ಪ್ರವೇಶಕ್ಕೆ ಮಾ.31 ಕೊನೆಯ ದಿನ

Update: 2023-03-24 13:53 GMT

ಉಡುಪಿ, ಮಾ.24: ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಉಡುಪಿ ಪ್ರಾದೇಶಿಕ ಕೇಂದ್ರದಲ್ಲಿ ಜನವರಿ ಆವೃತ್ತಿಯ ಬಿ.ಎ, ಬಿ.ಕಾಂ, ಬಿ.ಲಿಬ್. ಐಸ್ಸಿ, ಡಿಪ್ಲೋಮಾ ಸರ್ಟಿಫಿಕೇಟ್, ಎಂ.ಎ, ಎಂ.ಕಾಂ,ಎಂ.ಬಿ.ಎ, ಎಂ.ಎಸ್ಸಿ, ಎಂ.ಲಿಬ್. ಐಸ್ಸಿ ಕೋರ್ಸುಗಳ ಪ್ರವೇಶಕ್ಕೆ ಮಾ.31 ಕೊನೆಯ ದಿನವಾಗಿದೆ.    

ಮಾರ್ಚ್ 25ರ ನಾಲ್ಕನೇ ಶನಿವಾರ ಮತ್ತು ಮಾ.26ರ ರವಿವಾರದಂದು ಪ್ರವೇಶ ಪ್ರಕ್ರಿಯೆ ನಡೆಯಲಿದ್ದು, ಜನವರಿ ಆವೃತ್ತಿಯ ದ್ವಿತೀಯ ಮತ್ತು ತೃತೀಯ ಕೋರ್ಸ್‌ಗಳ ನವೀಕರಣವೂ ನಡೆಯುತ್ತಿದ. ಹೀಗಾಗಿ ಪ್ರಾದೇಶಿಕ ಕೇಂದ್ರ ಕಚೇರಿ ಎಂದಿನಂತೆ ತೆರೆದಿರುತ್ತದೆ.

ಈ ಕುರಿತ ಹೆಚ್ಚಿನ ಮಾಹಿತಿಗೆ  ವಿವಿಯ- www.ksoumysuru.ac.in- ವೆಬ್‌ಸೈಟ್ ಅನ್ನು ಸಂಪರ್ಕಿಸಬಹುದು ಎಂದು ಉಡುಪಿ ಪ್ರಾದೇಶಿಕ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Similar News