ಬಜಾಲ್: ಮನೆಯ ಮೇಲೆ ಮರ ಬಿದ್ದು ಅಪಾರ ಹಾನಿ
Update: 2023-03-26 15:26 GMT
ಮಂಗಳೂರು: ನಗರ ಹೊರವಲಯದ ಬಜಾಲ್ ಸಮೀಪ ಸಣ್ಣ ಅಮೆವು ಎಂಬಲ್ಲಿನ ಮನೆಯೊಂದಕ್ಕೆ ಆಲದ ಮರ ಬಿದ್ದ ಘಟನೆ ಶನಿವಾರ ನಡೆದಿದೆ.
ಶೇಕಬ್ಬ ಎಂಬವರ ಮನೆಗೆ ಸುಮಾರು ನೂರು ವರ್ಷ ಹಳೆಯ ಆಲದ ಮರ ಬಿದ್ದಿದೆ. ಇದರಿಂದ ಹೆಂಚು ಸಂಪೂರ್ಣ ಹಾನಿಗೊಂಡು ಆಪಾರ ನಷ್ಟ ಸಂಭವಿಸಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಕಾರ್ಪೊರೇಟರ್ ಆಶ್ರಫ್ ಬಜಾಲ್ ತೆರಳಿ ಸ್ಥಳೀಯ ಯುವಕರ ಜೊತೆಗೂಡಿ ಶ್ರಮದಾನ ನಡೆಸಿದರು.