ತೈಲ ಉತ್ಪಾದನೆ ಕುಂಠಿತಗೊಳಿಸಲು ರಷ್ಯಾ, ಗಲ್ಫ್ ದೇಶಗಳ ನಿರ್ಧಾರ

Update: 2023-04-03 03:02 GMT

ರಿಯಾದ್: ಹೆಚ್ಚು ಕಚ್ಚಾತೈಲ ಪಂಪ್ ಮಾಡುವಂತೆ ಅಮೆರಿಕ ಒತ್ತಡ ಹೇರಿದ ಬೆನ್ನಲ್ಲೇ, ಸೌದಿ ಅರೇಬಿಯಾ ನೇತೃತ್ವದ ಗಲ್ಫ್ ದೇಶಗಳು ತೈಲ ಉತ್ಪಾದನೆ ಕಡಿತಗೊಳಿಸಲು ನಿರ್ಧರಿಸಿವೆ. ಮಾರುಕಟ್ಟೆ ಸ್ಥಿರತೆ ತರುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಈ ದೇಶಗಳು ಪ್ರಕಟಿಸಿವೆ.

ಸೌದಿ ಅರೇಬಿಯಾ, ಇರಾಕ್, ಯುಎಇ, ಕುವೈತ್, ಅಲ್ಜೀರಿಯಾ ಮತ್ತು ಒಮನ್ ದೇಶಗಳು ಈ ವರ್ಷದ ಮೇ ತಿಂಗಳಿಂದ ವರ್ಷಾಂತ್ಯದ ವರೆಗೆ ದಿನಕ್ಕೆ 10 ಲಕ್ಷ ಬ್ಯಾರಲ್ ಉತ್ಪಾದನೆ ಕಡಿತಗೊಳಿಸಲು ನಿರ್ಧರಿಸಿವೆ. ಕಳೆದ ಅಕ್ಟೋಬರ್‌ನಲ್ಲಿ ಒಪೆಕ್+ ಒಕ್ಕೂಟ ತೈಲ ಉತ್ಪಾದನೆಯನ್ನು ದಿನಕ್ಕೆ ಇಪ್ಪತ್ತು ಲಕ್ಷ ಬ್ಯಾರಲ್ ಕಡಿಮೆ ಮಾಡಲು ನಿರ್ಧಾರ ಕೈಗೊಂಡ ಬಳಿಕ ಈ ಕಡಿತ ಅತ್ಯಂತ ದೊಡ್ಡ ಪ್ರಮಾಣದ ಇಳಿಕೆಯಾಗಿದೆ.

ಜವಾಬ್ದಾರಿಯು ಹಾಗೂ ತಡೆಯಾತ್ಮಕ ಕ್ರಮವಾಗಿ ದಿನಕ್ಕೆ 5 ಲಕ್ಷ ಬ್ಯಾರಲ್ ಕಚ್ಚಾ ತೈಲ ಉತ್ಪಾದನೆ ಕಡಿತಗೊಳಿಸುವುದಾಗಿ ಒಪೆಕ್+ ಸದಸ್ಯ ದೇಶವಾಗಿರುವ ರಷ್ಯಾ ಪ್ರಕಟಿಸಿದೆ. ತೈಲ ಮಾರುಕಟ್ಟೆಯಲ್ಲಿ ಸ್ಥಿರತೆ ತರುವ ಪ್ರಯತ್ನವಾಗಿ ಈ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಸೌದಿ ಇಂಧನ ಸಚಿವಾಲಯದ ಮೂಲಗಳು ಹೇಳಿವೆ. ವಿವಿಧ ದೇಶಗಳು ಸರಣಿ ಹೇಳಿಕೆ ನೀಡುವ ಮೂಲಕ ಈ ಕಡಿತವನ್ನು ಬಹಿರಂಗಪಡಿಸಿವೆ.

Similar News