BITAIN ನಿಂದ ದುಬೈನಲ್ಲಿ ಗ್ರ್ಯಾಂಡ್ ಇಫ್ತಾರ್ ಕೂಟ ಮತ್ತು ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ

Update: 2023-04-03 13:11 GMT

ದುಬೈ: ಬ್ಯಾರೀಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಅಲುಮಿನಿ ಇಂಟರ್‌ನ್ಯಾಷನಲ್‌ (BITAIN)‌  ದುಬೈಯಲ್ಲಿ ಎಪ್ರಿಲ್‌ 1 ರಂದು ಗ್ರ್ಯಾಂಡ್ ಇಫ್ತಾರ್ ಕೂಟ ಮತ್ತು 'ಅಲುಮ್ನಿ ರಿಯುನಿಯನ್‌ 2023' ಆಯೋಜಿಸಿತ್ತು. ದುಬೈಯ ದೇರಾ ಸಿಟಿ ಸೆಂಟರ್‌ನಲ್ಲಿರುವ ಐಬಿಸ್‌ ಹೋಟೆಲ್‌ನಲ್ಲಿ ಸಮಾರಂಭ ನಡೆಯಿತು.

ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಸಂಘದ ಆರನೇ ಅಧಿಕೃತ ಸೌಹಾರ್ದಕೂಟ ಇದಾಗಿದೆ ಎಂದು ಬಿಐಟಿಎಐಎನ್‌ ಮಂಡಳಿ ಹೇಳಿದೆ.

ಬ್ಯಾರೀಸ್‌ ಗ್ರೂಪ್‌ನ ಅಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕರಾದ ಸಯ್ಯದ್‌ ಮೊಹಮ್ಮದ್‌ ಬ್ಯಾರಿ,  ಸೋಭಾ ರಿಯಾಲ್ಟಿ, ದುಬೈ ಇದರ ಸಿಇಒ ಫ್ರಾನ್ಸಿಸ್‌ ಆಲ್ಫ್ರೆಡ್‌, ಐಸಿಟಿ ಕನ್ಸಲ್ಟೆಂಟ್ಸ್‌ ಇದರ ಸಿಇಒ ಮತ್ತು ಸಲಹೆಗಾರರಾಗಿರುವ ಅಸದ್‌ ಹಖ್‌ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. BITAIN ಅಲುಮ್ನಿ ಅಧ್ಯಕ್ಷ ಮುಹಮ್ಮದ್ ಅಫ್ಝಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಬ್ಯಾರೀಸ್‌ ಎಜುಕೇಶನ್‌, ಬ್ಯಾರೀಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಐರಾ ಫಾರ್‌ ಮೆಡಿಕಲ್‌, ಆಲ್ಪ್ಸ್‌ ಸ್ಟಾರ್‌ ಮತ್ತು ಆಲ್ಫ್ಕೊ ಈ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದವು.

Similar News