​ಅಂಬೇಡ್ಕರ್ ಜಯಂತಿ ಆಚರಣೆ: ಸರಕಾರದ ಕ್ರಮಕ್ಕೆ ದಸಂಸ ಖಂಡನೆ

Update: 2023-04-06 12:44 GMT

ಕುಂದಾಪುರ, ಎ.5: ಅಂಬೇಡ್ಕರ್ ಜಯಂತಿ ಆಚರಣೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕೃತ ಪ್ರಕಟಣೆ ಪಟ್ಟಿಯಲ್ಲಿ ಪ್ರಕಟಿಸದೆ ಸಂವಿಧಾನ ಶಿಲ್ಪಿಗೆ ಅಗೌರವ ತೋರಿರುವ ಕ್ರಮವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕುಂದಾಪುರ ತಾಲೂಕು ಸಂಚಾಲಕ ಕೆ.ಸಿ.ರಾಜು ಬೆಟ್ಟಿನಮನೆ ಖಂಡಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರಡಿಸಿರುವ 2023-2024ರ  ಜಯಂತಿ ಗಳ ಪಟ್ಟಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಉದ್ದೇಶ ಪೂರ್ವಕವಾಗಿ ಸೇರಿಸದಿರುವುದು ಭಾರತದ ಸಂವಿಧಾನಕ್ಕೆ ಅಗೌರವ ತೋರಿಸಿ ದಂತಾಗಿದೆ. ನಮ್ಮ ದೇಶದಲ್ಲಿ ಅಂಬೇಡ್ಕರ್ ಅವರನ್ನು ಕೇವಲ ಜಾತಿಯಿಂದಲೇ  ನೋಡುತ್ತಾ ಅವರನ್ನು ಮತ್ತು ಅವರು ದೇಶಕ್ಕೆ ನೀಡಿರುವ ಕೊಡುಗೆಯನ್ನು ಕಡೆಗಣಿಸಿ ಒಂದಲ್ಲಾ ಒಂದು ರೀತಿಯ ಅಪಮಾನ ಮಾಡುತ್ತಲೆ ಬರುತ್ತಿದೆ.

ಆಡಳಿತ ಪಕ್ಷದ ಅಧೀನದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಸರಕಾರ ಆದೇಶದಂತೆ ಅಂಬೇಡ್ಕರ್ ಜಯಂತಿಯನ್ನು ಪಟ್ಟಿಯಲ್ಲಿ ಸೇರಿಸದೇ ಇರ ಬಹುದು. ಇಂತಹ  ಕೆಟ್ಟ ನಿರ್ಧಾರವನ್ನು ಈ ಕೂಡಲೇ ಸರಕಾರ ಹಿಂತೆಗೆದು ಕೊಳ್ಳಬೇಕು ಮತ್ತು  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳಬೇಂದು ಕೆ.ಸಿ.ರಾಜು ಬೆಟ್ಟಿನಮನೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Similar News