ಹಿರಿಯಡ್ಕ: ಲಾರಿ ಢಿಕ್ಕಿ; ಬೈಕ್ ಸವಾರ ಮೃತ್ಯು

Update: 2023-04-16 15:29 GMT

ಹಿರಿಯಡ್ಕ : ಲಾರಿಯೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಹಿರಿಯಡ್ಕ ಕುಕ್ಕೆಹಳ್ಳಿ ರಸ್ತೆಯ ನಾಗಬನ ಬಳಿ ನಡೆದಿದೆ.

ಮೃತರನ್ನು ಕುಕ್ಕೆಹಳ್ಳಿಯ ರಾಘವೇಂದ್ರ ನಾಯ್ಕ್ ಎಂದು ಗುರುತಿಸಲಾಗಿದೆ. ಸಹಸವಾರ ಕುಕ್ಕೆಹಳ್ಳಿಯ ಬಚ್ಚ ನಾಯ್ಕ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಾಲಕ ಜಗದೀಶ್ ಲಾರಿಯನ್ನು ರಸ್ತೆಯ ಉಬ್ಬಿನಲ್ಲಿ ಏಕಾಏಕಿ ಯಾವುದೇ ಸೂಚನೆಯನ್ನು ನೀಡದೆ ಹಿಮ್ಮುಖವಾಗಿ ಚಲಾಯಿಸಿಕೊಂಡು ಬಂದು ಹಿರಿಯಡ್ಕ ಕಡೆಯಿಂದ ಬರುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News