ನದಿಯಲ್ಲಿ ಮೀನುಹಿಡಿಯಲು ತೆರಳಿದಾತ ಮೊಸಳೆಗಳಿಗೆ ಬಲಿ

Update: 2023-05-03 17:37 GMT

ಸಿಡ್ನಿ,ಮೇ 3: ಮೊಸಳೆಗಳ ಉಪಟಳವಿರುವ ನದಿನೀರಿನಲ್ಲಿ ಮೀನುಹಿಡಿಯಲು ತೆರಳಿದ್ದ ಆಸ್ಟ್ರೇಲಿಯದ ವ್ಯಕ್ತಿಯೊಬ್ಬನ ಶವದ ಅವಶೇಷಗಳು, ಎರಡು ಮೊಸಳೆಗಳ ದೇಹದಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಮೃತನನ್ನು 65 ವರ್ಷ ವಯಸ್ಸಿನ ಕೆವಿನ್ ಡಾರ್ಮೊಡಿ ಎಂದು ಗುರುತಿಸಲಾಗಿದೆಯೆಂದು ಆಸ್ಟ್ರೇಲಿಯದ ಮಾಧ್ಯಮಗಳು ವರದಿ ಮಾಡಿವೆ . ಮೀನುಹಿಡಿಯಲು ತೆರಳಿದ್ದ ತಂಡವೊಂದರ ಜೊತೆಗೆ ಆತ ಉತ್ತರ ಕ್ವೀನ್ಸ್‌ಲ್ಯಾಂಡ್‌ಗೆ ತೆರಳಿದ್ದರು. ಮೀನುಹಿಡಿಯುವುದಕ್ಕೆ ಮುನ್ನ ಮೊಸಳೆಯೊಂದನ್ನು ಓಡಿಸುವ ಪ್ರಯತ್ನದಲ್ಲಿ ಈ ದುರಂತ ಸಂಭವಿಸಿದೆ.

ಆನಂತರ ರೇಂಜರ್‌ಗಳು ತಂಡವು ಮೀನುಗಾರಿಕೆ ನಡೆಸುತ್ತಿದ್ದ ಪ್ರದೇಶದಲ್ಲಿದ್ದ ಎರಡು ಮೊಸಳೆಗಳನ್ನು ರೈಫಲ್‌ಗಳಿಂದ ಗುಂಡಿಕ್ಕಿ ಸಾಯಿಸಿದ್ದರು. ಅವುಗಳೆರಡರ ದೇಹದಲ್ಲಿ ಮಾನವನ ದೇಹದ ಅವಸೇಷಗಳು ಪತ್ತೆಯಾಗಿವೆ ಎಂದು ಪೊಲೀಸು ತಿಳಿಸಿದ್ದಾರೆ. ಇದೊಂದು ಅತ್ಯಂತ ದಾರುಣ ಅಂತ್ಯವೆಂದು ಹೆಂಡರ್ಸನ್ ಬಣ್ಣಿಸಿದ್ದಾರೆ.

Similar News