ಉಡುಪಿ: ಮತದಾನದ ಬಳಿಕ ರಿಲ್ಯಾಕ್ಸ್ ಮೂಡಿನಲ್ಲಿ ಅಭ್ಯರ್ಥಿಗಳು

ಕಾರ್ಯಕರ್ತರೊಂದಿಗೆ ಸಮಾಲೋಚನೆ

Update: 2023-05-11 14:50 GMT

ಉಡುಪಿ, ಮೇ 11: ಕಳೆದ 15-20 ದಿನಗಳಿಂದ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳು ಇದೀಗ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ. ಈ ಮಧ್ಯೆಯೂ ಅಭ್ಯರ್ಥಿಗಳು ಇಂದು ಕಾರ್ಯಕರ್ತರೊಂದಿಗೆ ಲೆಕ್ಕಚಾರದಲ್ಲಿ ಬ್ಯುಸಿಯಾಗಿರುವುದು ಕಂಡುಬಂತು.

ಕಾರ್ಕಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಇಂದು ಕಾರ್ಕಳ ವಿಕಾಸ ಕಚೇರಿಯಲ್ಲಿ ಕಾರ್ಯಕರ್ತರ ಜೊತೆ ಸಮಾಲೋಚ ನೆಯಲ್ಲಿ ಬ್ಯುಸಿಯಾಗಿದ್ದರು. ಬೂತ್‌ನಿಂದ ಅಂಕಿಅಂಶಗಳ ತರಿಸಿಕೊಂಡು ಲೆಕ್ಕಾಚಾರದಲ್ಲಿ ತೊಡಗಿರುವುದು ಕಂಡುಬಂತು. ‘ಚುನಾವಣೆಯನ್ನು ಯಶಸ್ವಿಯಾಗಿಯಾಗಿ ಪೂರೈಸಿದ್ದೆವೆ. ಮೂವತ್ತು ದಿನಗಳ ಕಾಲ ಮತ ಬೇಟೆ ಮಾಡಿದ್ದೇವೆ. ಹಲವು ಅಪಪ್ರಚಾರ ಮತ್ತು ಸುಳ್ಳು ಸುದ್ದಿಗಳ ಮಧ್ಯೆ ಮತದಾರ ಒಮ್ಮತದಿಂದ ಮತದಾನ ಮಾಡಿದ್ದಾರೆ. ಕ್ಷೇತ್ರದಲ್ಲಿ ಶೇ.82 ಮತದಾನವಾಗಿದೆ. ಇದು ಬಿಜೆಪಿಗೆ ವರದಾನವಾಗಲಿದೆ’ ಎಂದು ಸುನೀಲ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಬೆಳಗ್ಗೆಯಿಂದ ಮನೆಯಲ್ಲಿ ಕಾರ್ಯಕರ್ತ ರೊಂದಿಗೆ ಗೆಲುವಿನ ಲೆಕ್ಕಚಾರದ ಬಗ್ಗೆ ಚರ್ಚೆ ನಡೆಸಿ ದರು. ಬಳಿಕ ಅವರು ಸಾರ್ವಜನಿಕವಾಗಿ ವಿವಿಧ ಕಾರ್ಯ ಕ್ರಮ ಮತ್ತು ಕಾಪು ಕ್ಷೇತ್ರದಾದ್ಯಂತ ವಿವಿಧ ಮದುವೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.  

ಬೈಂದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮುಂಜಾನೆ ತಮ್ಮ ಕಟ್‌ ಬೆಲ್ತೂರು ನಿವಾಸಕ್ಕೆ ಆಗಮಿಸಿದ ಅಭಿಮಾನಿ ಗಳು, ಕಾರ್ಯಕರ್ತರು, ಸಾರ್ವಜನಿಕರ ಜೊತೆ ಮಾತುಕತೆ ನಡೆಸಿದರು. ಬೆಳಿಗ್ಗೆ 10 ಗಂಟೆ ಬಳಿಕ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಕ್ಷೇತ್ರ ವ್ಯಾಪ್ತಿಯ ಮದುವೆ ಸಹಿತ ವಿವಿಧ ಶುಭಸಮಾರಂಭ ಗಳಲ್ಲಿ ಭಾಗವಹಿಸಿದ್ದರು.

ಉಡುಪಿ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಬೆಳಗ್ಗೆ ಮನೆಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು. ಬಳಿಕ ಉಡುಪಿ ರಥಬೀದಿಯ ರಾಘವೇಂದ್ರ ಮಠ, ಸಾಲಿಗ್ರಾಮ ಆಂಜನೇಯ ಸ್ವಾಮಿ ದೇವಸ್ಥಾನ, ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಕಡಿಯಾಳಿ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮದಲ್ಲಿ ಮತ್ತು ವಿವಿಧ ವಿವಾಹ ಸಮಾರಂಭದಲ್ಲಿ ಭಾಗವಹಿಸಿದರು.

ಉಡುಪಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್‌ರಾಜ್ ಕಾಂಚನ್ ಚುನಾವಣೆ ಮುಗಿದ ಮರುದಿನವೇ ತನ್ನ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅದೇ ರೀತಿ ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ, ಮನೆಯವರೊಂದಿಗೆ ಕಾಲ ಕಳೆದು, ಬಳಿಕ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು. ಬಳಿಕ ವಿವಿಧ ಶುಭ ಸಮಾರಂಭಗಳಲ್ಲಿ ಭಾಗವಹಿಸಿದರು.

‘ಎಕ್ಸಿಟ್ ಪೋಲ್‌ನಲ್ಲಿ ಬೇರೆ ಬೇರೆ ಸಮಿಕ್ಷೆ ಬಂದಿದೆ. ಆದರೆ ಗ್ರಾಮೀಣ ನಾಡಿ ಮಿಡಿತ ಅರ್ಥ ಮಾಡಿಕೊಂಡಗ ಬಿಜೆಪಿ ಪರ ಹೆಚ್ಚು ಒಲವು ತೋರಿಸಿ ದ್ದಾರೆ. ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ನಾಯಕರುಗಳ ಕಾರ್ಯಕ್ಕೆ ಜನ ಬೆಂಬಲ ವ್ಯಕ್ತಪಡಿಸಿದ್ದಾರೆ. ಎಕ್ಸಿಟ್ ಪೋಲ್‌ಗಳ ವಿಶ್ಲೇಷಣೆ ಮಾಡಲ್ಲ. ಬಹು ಮತದ ಸರಕಾರ ಬರುತ್ತದೆ. ಸಮೀಕ್ಷೆ ಮೀರಿ ಬಿಜೆಪಿ ಪರ ಗೆಲುವು ಸಾಧಿಸಲಿದೆ.
-ಸುನೀಲ್ ಕುಮಾರ್, ಸಚಿವರು

Similar News