ತೆಂಕನಿಡಿಯೂರು ಬಾಲ ಸಂಸ್ಕಾರ ಕೇಂದ್ರಕ್ಕೆ ದೇಣಿಗೆ ಹಸ್ತಾಂತರ
ಉಡುಪಿ, ಮೇ 16: ಕಲಾವಿದ ಪಿ.ಎನ್.ಆಚಾರ್ಯರ ಕಲಾಕೃತಿಗಳನ್ನೊಳ ಗೊಂಡ ಕಲಾಸಿರಿ ಗ್ರಂಥ ಮಾರಾಟ ದಿಂದ ಸಂಗ್ರಹವಾದ ಮೊತ್ತದಲ್ಲಿ ಒಂದು ಲಕ್ಷ ರೂ,. ಚೆಕ್‌ನ್ನು ತೆಂಕನಿಡಿಯೂರು ಬಾಲಸಂಸ್ಕಾರ ಕೇಂದ್ರಕ್ಕೆ ದೇಣಿಗೆಯಾಗಿ ನೀಡಲಾಯಿತು.
ಬಾಲ ಸಂಸ್ಕಾರ ಕೇಂದ್ರದ ಮಾತೃ ಸಂಸ್ಥೆಯಾದ ಶ್ರೀಕಾಳಿಕಾಂಬಾ ಭಜನಾ ಸಂಘವು ಇತ್ತೀಚೆಗೆ ಆಯೋಜಿಸಿದ ವಿಕಾಸ -2023 ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಿ.ಎನ್.ಆಚಾರ್ಯ ಅಭಿಮಾನಿ ಬಳಗದ ಅಧ್ಯಕ್ಷ ಅಲೆವೂರು ಯೋಗೀಶ ಆಚಾರ್ಯರು ಕಾಳಿಕಾಂಬಾ ಭಜನಾ ಸಂಘದ ಅಧ್ಯಕ್ಷ ಟಿ.ಕೃಷ್ಣ ಆಚಾರ್ಯ ಹಾಗೂ ಬಾಲ ಸಂಸ್ಕಾರ ಕೇಂದ್ರದ ಅಧ್ಯಕ್ಷ ಪ್ರದೀಪ ಆಚಾರ್ಯ ಅವರಿಗೆ ನೀಡಿದರು.
ಇದೇ ಸಂದರ್ಭದಲ್ಲಿ ಅಭಿಮಾನಿ ಬಳಗದ ಸದಸ್ಯರಾದ ಕೆ.ಮುರಲಿಧರ್, ಬಿ.ಎ.ಆಚಾರ್ಯ, ರತ್ನಾವತಿ ಜೆ.ಬೈಕಾಡಿ, ಅಚ್ಚುತ್ತ ಆಚಾರ್ಯ, ಚಂದ್ರಶೇಖರ ಆಚಾರ್ಯ, ಅಪ್ಪಿಶಿವಯ್ಯ ಆಚಾರ್ಯ, ಪಿ.ಎನ್.ಆಚಾರ್ಯ ಉಪಸ್ಥಿತರಿ ದ್ದರು. ಕಲಾಸಿರಿ ಗ್ರಂಥ ಪ್ರಕಟನೆಗೆ ವಿಶೇಷ ಸಹಕರಿಸಿದ ಕೆ. ಮಹಾಬಲೇಶ್ವರ ಆಚಾರ್ಯಗುಂಡಿಬೈಲು ಅವರನ್ನು ಸನ್ಮಾನಿಸಲಾಯಿತು.