27ನೇ ಬಾರಿ ಎವರೆಸ್ಟ್ ಶಿಖರವೇರಿದ ನೇಪಾಳದ ಶೆರ್ಪಾ ವಿಶ್ವದಾಖಲೆ

Update: 2023-05-17 16:19 GMT

ಕಠ್ಮಂಡು, ಮೇ 17: ನೇಪಾಳದ 53 ವರ್ಷದ ಪರ್ವತಾರೋಹಿ ಕಮಿರಿತ ಶೆರ್ಪ ವಿಶ್ವದ ಅತೀ ಎತ್ತರದ ಎವರೆಸ್ಟ್ ಪರ್ವತವನ್ನು  27ನೇ ಬಾರಿ ಯಶಸ್ವಿಯಾಗಿ ಏರುವುದರೊಂದಿಗೆ ವಿಶ್ವದಾಖಲೆ ಬರೆದಿದ್ದಾರೆ ಎಂದು ನೇಪಾಳದ ಪ್ರವಾಸೋದ್ಯಮ ಇಲಾಖೆ ವರದಿ ಮಾಡಿದೆ.

ಬುಧವಾರ ಬೆಳಿಗ್ಗೆ ಕಮಿರಿತ ಶೆರ್ಪ, ವಿದೇಶಿ ಪರ್ವತಾರೋಹಿಯ ಜತೆ 29,032 ಅಡಿ ಎತ್ತರದ ಎವರೆಸ್ಟ್ ಶಿಖರವನ್ನು ಯಶಸ್ವಿಯಾಗಿ ತಲುಪಿದ್ದಾರೆ. ಈ ಮೂಲಕ 27ನೇ ಬಾರಿ ಈ ಸಾಧನೆ ಮಾಡಿ ವಿಶ್ವದಾಖಲೆಗೆ ಪಾತ್ರವಾಗಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಬಿಗ್ಯಾನ್ ಕೊಯಿರಾಲಾ ಹೇಳಿದ್ದಾರೆ.

1994ರಲ್ಲಿ ಮೊತ್ತಮೊದಲ ಬಾರಿ ಎವರೆಸ್ಟ್ ಪರ್ವತ ಏರಿದ ಕಮಿರಿತ, ಆ ಬಳಿಕ ಪ್ರತೀ ವರ್ಷ(2014, 2015 ಮತ್ತು 2020 ಹೊರತುಪಡಿಸಿ) ಈ ಸಾಧನೆ ಪುನರಾವರ್ತಿಸಿದ್ದಾರೆ.

Similar News