ಜಿ7 ಶೃಂಗಸಭೆ: ‘ನಮಸ್ತೆ’ ಎಂದು ಭಾರತೀಯರನ್ನು ಸ್ವಾಗತಿಸಿದ ರೊಬೋಟ್

Update: 2023-05-20 17:56 GMT

ಹಿರೋಷಿಮಾ: ಜಪಾನ್ ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯ ಅಂತರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಿಯೋಜಿಸಲಾಗಿರುವ ರೊಬೋಟ್ ‘ನಮಸ್ತೆ’ ಎಂದು ಸ್ವಾಗತಿಸಿ ಜಪಾನ್ ನ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಜಪಾನ್ ಗೆ ಭೇಟಿ ನೀಡುವಂತೆ ಆಹ್ವಾನಿಸಿದೆ.

ಮಾಧ್ಯಮ ಕೇಂದ್ರದಲ್ಲಿ ಜಪಾನ್ ನ ಅತ್ಯುನ್ನತ ತಂತ್ರಜ್ಞಾನದ ರೊಬೋಟ್ ‘ಭಾರತೀಯರಿಗೆ ನಮಸ್ತೆ’ ಎಂದು ಹೇಳುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ‘ಪರಮಾಣು ಶಸ್ತ್ರಾಸ್ತ್ರಗಳ ನಿರಸ್ತ್ರೀಕರಣ ಮತ್ತು ಪ್ರಸರಣ ಮಾಡದಿರುವುದು’ ಈ ವರ್ಷ ಜಪಾನ್ನ ಆತಿಥ್ಯದಲ್ಲಿ ನಡೆಯುವ ಜಿ7 ಶೃಂಗಸಭೆಯ ಮುಖ್ಯ ಉದ್ದೇಶವಾಗಿದೆ.

ಶನಿವಾರ ನಡೆದ ‘ಬಹು ಬಿಕ್ಕಟ್ಟುಗಳನ್ನು ಪರಿಹರಿಸಲು ಒಟ್ಟಾಗಿ ಕೆಲಸ ಮಾಡುವುದು’ ಎಂಬ ವಿಷಯದಲ್ಲಿ ನಡೆದ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದು ಜಗತ್ತನ್ನು ಕಾಡುತ್ತಿರುವ ಆಹಾರ, ಆರೋಗ್ಯ ಮತ್ತು ಅಭಿವೃದ್ಧಿ ಸಂಬಂಧಿತ ಸಮಸ್ಯೆಗಳ ಪರಿಹರಿಸಲು ಕ್ರಮಕ್ಕೆ ಕರೆ ನೀಡುವ 10 ಅಂಶಗಳನ್ನು ಪಟ್ಟಿ ಮಾಡಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.

Similar News