ಮಿಸ್ಟರ್ & ಮಿಸಸ್ ಯುಎಇ ಇಂಟರ್‌ನ್ಯಾಶನಲ್: 'ಬೆಸ್ಟ್‌ ಪರ್ಸನಾಲಿಟಿ' ಪ್ರಶಸ್ತಿ ಗೆದ್ದ ಮಂಗಳೂರಿನ ಸ್ವಾತಿ

Update: 2023-05-25 13:22 GMT

ದುಬೈ: ಮಿಸ್ಟರ್ & ಮಿಸಸ್ ಯುಎಇ ಇಂಟರ್‌ನ್ಯಾಶನಲ್ ಬ್ಯೂಟಿ ಪೇಜೆಂಟ್ ಸೀಸನ್-4 ರಲ್ಲಿ ಮಂಗಳೂರಿನ ಜೆಪ್ಪು ನಿವಾಸಿ ಸ್ವಾತಿ ಮಂಗಳ ಅವರು ʼಬೆಸ್ಟ್‌ ಪರ್ಸನಾಲಿಟಿʼ ಪ್ರಶಸ್ತಿಯನ್ನು ಗೆದ್ದಿದ್ದಾರೆ. 

 2023 ರ ಮಿಸ್ಟರ್ & ಮಿಸಸ್ ಯುಎಇ ಇಂಟರ್ನ್ಯಾಷನಲ್ ಅನ್ನು ಮೇ 7 ರಂದು ರಾಡಿಸನ್ ಬ್ಲೂ, ದುಬೈ ಕೆನಾಲ್ ವ್ಯೂ ಹೋಟೆಲ್‌ ನಲ್ಲಿ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಒಟ್ಟು 31 ಸ್ಪರ್ಧಿಗಳಿದ್ದರು. ಗೋಲ್ಡ್‌ ವಿಭಾಗದಲ್ಲಿ 24 ರಿಂದ 37 ವರ್ಷದೊಳಗಿನ 11 ಸ್ಪರ್ಧಿಗಳು ಭಾಗವಹಿಸಿದ್ದರು. 38 ರಿಂದ 50 ವರ್ಷದೊಳಗಿನ ಪ್ಲಾಟಿನಂ ವಿಭಾಗದಲ್ಲಿ 10 ಮಂದಿ ಭಾಗವಹಿಸಿದ್ದರು ಹಾಗೂ ಮಿಸ್ಟರ್ ಯುಎಇ ಇಂಟರ್ನ್ಯಾಷನಲ್ ವಿಭಾಗದಲ್ಲಿ 10 ಮಂದಿ ಭಾಗವಹಿಸಿದ್ದರು. 

2006 ರಿಂದ ಯೋಗಾಭ್ಯಾಸ ಮಾಡುತ್ತಿರುವ ಸ್ವಾತಿ ಮಂಗಳ ಅವರು ಟ್ಯಾಲೆಂಟ್ ಸುತ್ತಿನಲ್ಲಿ ಯೋಗ ಪ್ರದರ್ಶಿಸಿದರು. ಬಳಿಕ ರ್ಯಾಂಪ್ ವಾಕ್ ಮತ್ತು ಪ್ರಶ್ನಾವಳಿ ಸುತ್ತು ನಡೆಯಿತು. ಎಥ್ನಿಕ್ ರೌಂಡ್, ಕೋಆರ್ಡಿನೇಷನ್ ಸೆಟ್ ರೌಂಡ್, ವೆಸ್ಟರ್ನ್ ವೇರ್ ರೌಂಡ್ ಮತ್ತು ಗೌನ್ ರೌಂಡ್ ಇತ್ತು.
 
ಗೋಲ್ಡ್‌ ವಿಭಾಗದಲ್ಲಿ ಸ್ವಾತಿ ಅವರು ಮಿಸಸ್‌ ಬೆಸ್ಟ್‌ ಪರ್ಷನಾಲಿಟಿ ಶೀರ್ಷಿಕೆಯನ್ನು ಗೆದ್ದುಕೊಂಡಿದ್ದಾರೆ. ಅವರಿಗೆ ಟರ್ಕಿಶ್ ಬ್ರ್ಯಾಂಡ್ ಫ್ಲೋರ್‌ಮಾರ್‌ನಿಂದ ಸ್ಯಾಶ್, ಪ್ರಮಾಣಪತ್ರ ಮತ್ತು ಗಿಫ್ಟ್ ಹ್ಯಾಂಪರ್ ನೀಡಲಾಗಿದೆ.

ಇದು ಯುಎಇ ಸರ್ಕಾರದ ಆಶ್ರಯದಲ್ಲಿ ಆಯೋಜಿಸಲಾದ ಮಿಸೆಸ್ ಯುಎಇ ಇಂಟರ್‌ನ್ಯಾಶನಲ್‌ನ 4 ನೇ ಸೀಸನ್ ಆಗಿದೆ.

Similar News