ರಸ್ತೆ ಬದಿಯ ಡಾಬಾಕ್ಕೆ ಢಿಕ್ಕಿ ಹೊಡೆದ ಕೆಮಿಕಲ್ ಟ್ಯಾಂಕರ್: ಇಬ್ಬರು ಸಜೀವ ದಹನ

Update: 2023-05-31 12:09 GMT

ಜೈಪುರ: ಕೆಮಿಕಲ್ ಸಾಗಿಸುತ್ತಿದ್ದ ಟ್ಯಾಂಕರ್ ರಸ್ತೆ ಬದಿಯ ಉಪಾಹಾರ ಗೃಹಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಸಜೀವ ದಹನವಾಗಿರುವ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಸಿಂಧಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಟ್ಯಾಂಕರ್ ಚಾಲಕ ನಿಂಬಾರಂ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡು 'ಧಾಬಾ'ಗೆ ಡಿಕ್ಕಿ ಹೊಡೆದಿದ್ದಾನೆ.

ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡಿತು. ಚಾಲಕ ವಾಹನದೊಳಗೆ ಸಿಲುಕಿಕೊಂಡಿದ್ದು, ದುರದೃಷ್ಟವಶಾತ್ ಹೋಟೆಲ್ ನಡೆಸುತ್ತಿದ್ದ ಭನ್ವಾರಾಮ್ ಕೂಡ ಬೆಂಕಿಯ ಕೆನ್ನಾಲಿಗೆಗೆ  ಸಿಕ್ಕಿಬಿದ್ದು ಸಾವನ್ನಪ್ಪಿದ್ದಾರೆ ಎಂದು ಸಿಂಧಾರಿ ಪೊಲೀಸ್ ಠಾಣೆ ಎಸ್‌ಎಚ್‌ಒ  ಸುರೇಂದ್ರ ಕುಮಾರ್ ತಿಳಿಸಿದ್ದಾರೆ.

ಘಟನೆಯಲ್ಲಿ ಧಾಬಾದ ಪಕ್ಕದಲ್ಲಿದ್ದ ಇನ್ನೆರಡು ಅಂಗಡಿಗಳಿಗೂ ಹಾನಿಯಾಗಿದೆ.

Similar News