ಅಮೆರಿಕದ ಉತಾಹ್ ರಾಜ್ಯದ ಶಾಲೆಗಳಲ್ಲಿ ಬೈಬಲ್ ಗೆ ನಿಷೇಧ

Update: 2023-06-03 18:13 GMT

ನ್ಯೂಯಾರ್ಕ್: ‘ಅಶ್ಲೀಲತೆ ಅಥವಾ ಹಿಂಸಾಚಾರದ ಕಾರಣದಿಂದ’ ಮಕ್ಕಳಿಗೆ ಸೂಕ್ತವಲ್ಲ ಎಂಬ ಕಾರಣಕ್ಕೆ  ಅಮೆರಿಕದ ಉತಾಹ್ ರಾಜ್ಯದ ಜಿಲ್ಲೆಯೊಂದರಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಲ್ಲಿ ಬೈಬಲ್ ಪುಸ್ತಕವನ್ನು ನಿಷೇಧಿಸಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.

ಶಾಲೆಗಳ ಲೈಬ್ರೆರಿಯಲ್ಲಿ ಇರುವ ಪುಸ್ತಕಗಳ ಬಗ್ಗೆ ಅಸಮಾಧಾನ, ಆಕ್ಷೇಪವಿದ್ದರೆ ಅದನ್ನು ಬದಲಾಯಿಸುವ ಬಗ್ಗೆ ಪೋಷಕರು ಸಲಹೆ ಮಾಡಬಹುದು ಎಂಬ ಕಾನೂನನ್ನು ಉತಾಹ್ ರಾಜ್ಯದಲ್ಲಿ 2022ರಲ್ಲಿ ಅಂಗೀಕರಿಸಿದ ಹಿನ್ನೆಲೆಯಲ್ಲಿ, ಕಳೆದ ಮಾರ್ಚ್ನ ನಲ್ಲಿ ಬೈಬಲ್ ಬಗ್ಗೆ ಪೋಷಕರೊಬ್ಬರು ದೂರು ನೀಡಿದ್ದರು.

ಬೈಬಲ್ ನಲ್ಲಿ ಅಪ್ರಾಪ್ತ ವಯಸ್ಕರಿಗೆ ಯಾವುದೇ ಗಂಭೀರ ಮೌಲ್ಯಗಳಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿತ್ತು.  ಅದರಂತೆ ಪರಿಶೀಲನಾ ಸಮಿತಿ ದೂರನ್ನು ಪರಿಶೀಲಿಸಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಲೈಬ್ರೆರಿಯಿಂದ ಬೈಬಲ್ ಪುಸ್ತಕವನ್ನು ತೆಗೆಯುವಂತೆ ಸೂಚಿಸಿದೆ. ಆದರೆ ಪ್ರೌಢಶಾಲೆಗಳಲ್ಲಿ ಈ ಪುಸ್ತಕಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಆದೇಶ ತಿಳಿಸಿದೆ.

Similar News