ಅಬುಧಾಬಿ: ಬ್ಯಾರೀಸ್ ವೆಲ್ಫೇರ್ ಫೋರಂ ನೂತನ ಆಡಳಿತ ಸಮಿತಿಯ ಪದಗ್ರಹಣ
ಅಬುಧಾಬಿ, ಜೂ.4: ಬ್ಯಾರೀಸ್ ವೆಲ್ಫೇರ್ ಫೋರಂ(ಬಿಡಬ್ಲ್ಯುಎಫ್), ಅಬುಧಾಬಿ ಇದರ ನೂತನ ಆಡಳಿತ ಸಮಿತಿಯ ಪದಗ್ರಹಣ ಸಮಾರಂಭ ಅಬುಧಾಬಿಯ ಇಂಡಿಯಾ ಸೋಶಿಯಲ್ ಸೆಂಟರ್ ಸಭಾಂಗಣದಲ್ಲಿ ಜರುಗಿತು
ಬಿಡಬ್ಲ್ಯುಎಫ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಮದುಮೂಲೆ ಮತ್ತು ಕಾರ್ಯದರ್ಶಿ ಹಮೀದ್ ಗುರುಪುರ ಸಮಾರಂಭ ನಡೆಸಿಕೊಟ್ಟರು. ಜಲೀಲ್ ಬಜ್ಪೆ ವಂದಿಸಿದರು.
ಪದ ಸ್ವೀಕರಿಸಿದ ಎಲ್ಲಾ ಪದಾಧಿಕಾರಿಗಳು ಸಮುದಾಯ ಮತ್ತು ಸಮಾಜದ ಅಭಿವೃದ್ಧಿ, ಅನಿವಾಸಿ ಕನ್ನಡಿಗರ ಹಿತಕ್ಕಾಗಿ ದುಡಿಯುವ ಪ್ರತಿಜ್ಞೆ ಮಾಡಿದರು.
ನೂತನ ಪದಾಧಿಕಾರಿಗಳ ವಿವರ ಇಂತಿವೆ.
ಅಧ್ಯಕ್ಷರಾಗಿ ಮುಹಮ್ಮದ್ ಅಲಿ ಉಚ್ಚಿಲ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ಲ ಮದುಮೂಲೆ, ಉಪಾಧ್ಯಕ್ಷರಾಗಿ ಹಂಝ ಅಬ್ದುಲ್ ಖಾದರ್, ಅಬ್ದುಲ್ ರವೂಫ್ ಕೈಕಂಬ, ಮುಖ್ಯ ಸಲಹೆಗಾರರಾಗಿ ಅಬ್ದುಲ್ ಬಶೀರ್ ಹಸನ್, ಸಲಹೆಗಾರರಾಗಿ ಮುಹಮ್ಮದ್ ಕಲ್ಲಾಪು, ಮುಹಮ್ಮದ್ ಹನೀಫ್, ಕೋ ಆರ್ಡಿನೇಟರ್ ಆಗಿ ಇಮ್ರಾನ್ ಅಹ್ಮದ್ ಅಬ್ದುಲ್ಲ, ಲೆಕ್ಕ ಪರಿಶೋಧಕರಾಗಿ ಅಬ್ದುಲ್ ಮಜೀದ್ ಎ.ಜಿ., ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಗುರುಪುರ, ಜತೆ ಕಾರ್ಯದರ್ಶಿಯಾಗಿ ಅಬ್ದುಲ್ ಜಲೀಲ್ ಜಿ.ಎಚ್., ಕೋಶಾಧಿಕಾರಿಯಾಗಿ ಅಬ್ದುಲ್ ಮಜೀದ್ ಆತೂರು, ಸಹ ಕೋಶಾಧಿಕಾರಿಯಾಗಿ ಮೊಯಿನುದ್ದೀನ್ ಹಂಡೇಲು, ಸಹ ಕೋ ಆರ್ಡಿನೇಟರ್ ಗಳಾಗಿ ಅಹ್ಮದ್ ನವಾಝ್ ಉಚ್ಚಿಲ್, ಅಬ್ದುಲ್ ರಶೀದ್ ವಿ.ಕೆ., ಅಬ್ದುಲ್ ಮುಜೀಬ್ ಉಚ್ಚಿಲ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ರಶೀದ್ ಬಿಜೈ, ಇರ್ಫಾನ್ ಅಹ್ಮದ್, ಬಶೀರ್ ಅಬ್ಬಾಸ್ ಉಚ್ಚಿಲ್, ನಝೀರ್ ಉಬಾರ್, ನಿಝಾಮುದ್ದೀನ್ ವಿ.ಕೆ., ಇಮ್ರಾನ್ ಕೃಷ್ಣಾಪುರ, ಸಿರಾಜುದ್ದೀನ್ ಪರ್ಲಡ್ಕ ಹಾಗೂ ಯಹ್ಯಾ ಕೊಡ್ಲಿಪೇಟೆ ಪದಗ್ರಹಣ ಮಾಡಿದರು.