ಕೆಸಿಎಫ್ ಸೌದಿ ರಾಷ್ಟ್ರೀಯ ಪ್ರತಿಭೋತ್ಸವ ಯಶಸ್ವಿ ಸಮಾಪ್ತಿ; ರಾಯಭಾರಿ ಅಧಿಕಾರಿಗಳಿಂದ ಶ್ಲಾಘನೆ

Update: 2023-06-14 12:06 GMT

ದಮಾಮ್: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಸೌದಿ ಅರೇಬಿಯಾ ರಾಷ್ಟ್ರೀಯ ಮಟ್ಟದ ಪ್ರಪ್ರಥಮ ಪ್ರತಿಭೋತ್ಸವವು ಜೂನ್ 09ರಂದು ದಮ್ಮಾಮಿನ ಉಮ್ಮುಸ್ಸಾಹಿಕ್ ಸಅದಿ ರೆಸಾರ್ಟ್ ನಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.

2023 ಜನವರಿಯಲ್ಲಿ ಯುನಿಟ್ ಮಟ್ಟದಿಂದ ಆರಂಭಗೊಂಡ ಪ್ರತಿಭೋತ್ಸವವು ನಂತರ ಸೆಕ್ಟರ್ ಹಾಗೂ ಝೋನ್ ಮಟ್ಟಗಳಲ್ಲಿ ನಡೆಸಲಾಗಿತ್ತು. ಝೋನ್ ಸಮಿತಿಗಳಿಂದ ವಿಜಯಿಗಳಾಗಿ ಆಗಮಿಸಿದ ಸರಿಸುಮಾರು 100ರಷ್ಟು ಪ್ರತಿಭೆಗಳು 4 ವಿಭಾಗಗಳಾಗಿ 37 ಸ್ಪರ್ಧೆಯಲ್ಲಿ ಭಾಗವಹಿಸಿದರು. 

ಜುಮುಆ ಬಳಿಕ ಆರಂಭಗೊಂಡ ಕಾರ್ಯಕ್ರಮದಲ್ಲಿ ಕಿರಾಅತ್, ಹಿಫ್'ಳ್, ವಿವಿಧ ಭಾಷೆಗಳಲ್ಲಿರುವ ಹಾಡು ಹಾಗೂ ಭಾಷಣ, ಚಿಕ್ಕ ಮಕ್ಕಳಿಗೆ ಕಥೆ ಹೇಳುವುದು, ಆಕರ್ಷಣೀಯವಾದ ರಸಪ್ರಶ್ನೆ, ಕವಾಲಿ, ಬುರ್ದಾ, ಚರ್ಚಾಗೋಷ್ಟಿ ಹಾಗೂ ದಪ್ಫ್ ಸ್ಪರ್ಧೆಗಳು ವೇದಿಕೆಯಲ್ಲಿ ನಡೆದರೆ, ಕಲರಿಂಗ್, ಮೆಮೊರಿ ಟೆಸ್ಟ್, ಫ್ರೆಸೆಂಟೇಶನ್, ಪೋಸ್ಟರ್ ಡಿಸೈನ್ ಹಾಗೂ ಪ್ರಬಂಧಗಳಂತಹ ವೇದಿಕೆಯೇತರ ಸ್ಪರ್ಧೆಗಳಾಗಿ ನಡೆಯಿತು.

ಸ್ಪರ್ಧಾಳುಗಳಾಗಿ ಆಗಮಿಸಿದ ಪ್ರತಿಯೊಬ್ಬ ಪ್ರತಿಭೆಗಳೂ ಉತ್ತಮ‌ ಪೈಪೋಟಿ ನಡೆಸಿ ಕೊನೆಯಲ್ಲಿ ಮುಆಝ್ ಕಾಟಿಪಳ್ಳ ರವರು ವೈಯುಕ್ತಿಕ ಚಾಂಪಿಯನ್ ಆದರೆ ಝೋನ್ ಗಳ ಪೈಕಿ ಜುಬೈಲ್ ಝೋನ್ ಚೊಚ್ಚಲ ಚಾಂಪಿಯನ್ಸ್ ಪಟ್ಟ ತನ್ನದಾಗಿಸಿಕೊಂಡಿತು.

ರಾಷ್ಟ್ರೀಯ ಮಟ್ಟದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಿಪಿ ಯೂಸುಫ್ ಸಖಾಫಿ ಬೈತಾರ್, ಭಾರತ ರಾಯಭಾರಿ ಕಚೇರಿಯ ಅಧಿಕಾರಿಗಳಾದ ಅನ್ವರ್ ಸಾದಾತ್, ಮೀರಝ್ ಝಹೀರ್ ಬೇಗ್, ಮಂಜು ಮಣಿಕುಟ್ಟನ್, ಕರ್ನಾಟಕ ರಾಜ್ಯ NRI Form ಸದಸ್ಯರಾದ ಅಬ್ದುಲ್ ಅಝೀಝ್ ಪವಿತ್ರ, ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ನೇತಾರರುಗಳಾದ ಕಮರುದ್ದೀನ್ ಗೂಡಿನಬಳಿ, ಅಬೂಬಕ್ಕರ್ ಹಾಜಿ ರೈಸ್ಕೋ, ಫಾರೂಕ್ ಕಾಟಿಪಳ್ಳ, NS ಅಬ್ದುಲ್ಲಾ,  ಕಲಂದರ್ ಕಕ್ಕೆಪದವು, ಉಮರ್ ಅಳಕೆಮಜಲು, ಬಹರೈನ್ ರಾಷ್ಟ್ರೀಯ ಅಧ್ಯಕ್ಷರಾದ ಜಮಾಲುದ್ದೀನ್ ವಿಟ್ಲ, ಪ್ರ.ಕಾರ್ಯದರ್ಶಿ ಹಾರಿಸ್ ಸಂಪ್ಯ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಾಷ್ಟ್ರೀಯ ಸಮಿತಿ ಪ್ರ.ಕಾರ್ಯದರ್ಶಿ ಸಾಲಿ ಬೆಳ್ಳಾರೆ, ಪ್ರತಿಭೋತ್ಸವ ಸಮಿತಿ ಚೆರ್ಮಾನ್ ಫೈಸಲ್ ಕೃಷ್ಣಾಪುರ, ಕನ್ವೀನರ್ ಫಾರೂಕ್ ಪಾಣೆಮಂಗಳೂರು, ಫೈನಾನ್ಷಿಯಲ್‌ ಕಂಟ್ರೋಲರ್ ಮುಹಮ್ಮದ್ ಮಲೆಬೆಟ್ಟು ಹಾಗೂ ಇನ್ನಿತರ ನೇತಾರರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ನಝೀರ್ ಹಾಜಿ ಕಾಶಿಪಟ್ನ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಯ್ಯಿದ್ ಅಬ್ದುರ್ರಹ್ಮಾನ್ ಅಲ್-ಬುಖಾರಿ ಉಚ್ಚಿಲ ತಂಙಳ್ ರವರು ದುಆ ಮಾಡಿದರು. ಬಶೀರ್ ತಲಪ್ಪಾಡಿಯವರು ಸ್ವಾಗತಿಸಿದ ಕಾರ್ಯಕ್ರಮವನ್ನು, ಸಂಘಟನಾ ಇಲಾಖೆಯ ಅಧ್ಯಕ್ಷರಾದ ರಶೀದ್ ಸಖಾಫಿ ಮಿತ್ತೂರು ಉದ್ಘಾಟನೆ ಮಾಡಿ ಕೋಶಾಧಿಕಾರಿ ಮುಹಮ್ಮದ್ ಕಲ್ಲರ್ಬೆಯವರು ಧನ್ಯವಾದ ಹೇಳಿದರು.

ಕೆಸಿಎಫ್ ದಮ್ಮಾಮ್‌ ಹಾಗೂ ಜುಬೈಲ್ ಝೋನ್ ಆತಿಥ್ಯದಲ್ಲಿ ನಡೆದ ಪ್ರಪ್ರಥಮ ಪ್ರತಿಭೋತ್ಸವದ ಸಂಪೂರ್ಣ ನಿಯಂತ್ರಣದ ಜವಾಬ್ದಾರಿಯನ್ನು ತೆಗೆದ ನೌಶಾದ್ ತಲಪ್ಪಾಡಿಯವರು ಕಾರ್ಯಕ್ರಮದ ಯಶಸ್ವಿಯಲ್ಲಿ ಮುಖ್ಯ ಪಾತ್ರ ವಹಿಸಿದರು. ಆಕರ್ಷಣೀಯ ಶೈಲಿಯಲ್ಲಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ ಇಕ್ಬಾಲ್ ಮಳ್ಳೂರು ಹಾಗೂ ಝಿಯಾದ್ ರವರು ನೆರೆದವರಲ್ಲಿ ಉತ್ಸಾಹವನ್ನು ತುಂಬುವಲ್ಲಿ ಯಶಸ್ವಿಯಾದರು.

Similar News